ಟ್ಯುನೀಷಿಯಾ: ಮುಳುಗುತ್ತಿದ್ದ ದೋಣಿಯಲ್ಲಿದ್ದ 64 ವಲಸಿಗರ ರಕ್ಷಣೆ

Photo Source: Facebook/Douane Tunisienne
ಟ್ಯೂನಿಸ್: ಟ್ಯುನೀಷಿಯಾದ ಪೂರ್ವ ಮೆಡಿಟರೇನಿಯನ್ ತೀರದ ಬಳಿ ಮುಳುಗಿದ ದೋಣಿಯಿಂದ 64 ವಲಸಿಗರನ್ನು ರಕ್ಷಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮಹ್ದಿಯಾ ಬಳಿ ದೋಣಿಯ ಇಂಧನ ಖಾಲಿಯಾಗಿ ದೋಣಿ ಮುಳುಗುತ್ತಿರುವ ಮಾಹಿತಿ ಪಡೆದ ಕರಾವಳಿ ಕಾವಲುಪಡೆಯ ಗಸ್ತು ದೋಣಿಗಳು ತಕ್ಷಣ ಧಾವಿಸಿ ದೋಣಿಯಲ್ಲಿದ್ದವರನ್ನು ರಕ್ಷಿಸಿವೆ. ಇವರು ಅಕ್ರಮವಾಗಿ ಯುರೋಪ್ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ದುರಂತದಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story





