ಟ್ಯುನೀಷಿಯಾ: ನಿರಾಶ್ರಿತರಿದ್ದ ದೋಣಿ ಮುಳುಗಿ 8 ಮಂದಿ ಸಾವು

ಸಾಂದರ್ಭಿಕ ಚಿತ್ರ
ಟ್ಯೂನಿಸ್, ಎ.29: ಮೆಡಿಟರೇನಿಯನ್ ಸಮುದ್ರದ ಮೂಲಕ ಯುರೋಪ್ನತ್ತ ಪ್ರಯಾಣಿಸುತ್ತಿದ್ದ ಆಫ್ರಿಕಾ ನಿರಾಶ್ರಿತರಿದ್ದ ದೋಣಿ ಟ್ಯುನೀಷಿಯಾದ ಕರಾವಳಿ ಬಳಿ ಮುಳುಗಿದ್ದು 8 ವಲಸಿಗರ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇತರ 29 ಮಂದಿಯನ್ನು ರಕ್ಷಿಸಿರುವುದಾಗಿ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಅಬ್ವಾಬೆಡ್ ನಗರದ ಬಳಿ ಸಮುದ್ರದ ನೀರಿನಲ್ಲಿ ದೋಣಿ ಮುಳುಗಿದ ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆ ನಡೆಸಿದ ಕರಾವಳಿ ರಕ್ಷಣಾ ತಂಡ 29 ನಿರಾಶ್ರಿತರನ್ನು ರಕ್ಷಿಸುವಲ್ಲಿ ಸಫಲವಾಗಿದೆ ಎಂದು ವರದಿ ಹೇಳಿದೆ. ಯುರೋಪ್ನಲ್ಲಿ ಉತ್ತಮ ಜೀವನವನ್ನು ಬಯಸುವ ಆಫ್ರಿಕಾ ದೇಶಗಳ ನಿವಾಸಿಗಳಿಗೆ ಟ್ಯುನೀಷಿಯಾ ಪ್ರಮುಖ ನಿರ್ಗಮನ ಕೇಂದ್ರವಾಗಿದ್ದು ಇಲ್ಲಿಂದ ಇಟಲಿಯ ಲ್ಯಾಂಪೆಡುಸ ದ್ವೀಪ ಕೇವಲ 150 ಕಿ.ಮೀ ದೂರವಿದೆ.
Next Story





