ಇರಾನ್ | ಇಬ್ಬರು IRGC ಸದಸ್ಯರ ಗುಂಡಿಕ್ಕಿ ಹತ್ಯೆ

ಸಾಂದರ್ಭಿಕ ಚಿತ್ರ | Photo Credit : ispionline.it
ಟೆಹರಾನ್, ಜೂ. 30: ಇರಾಕ್ನ ಕುರ್ದಿಸ್ತಾನ್ ಪ್ರಾಂತದ ಗಡಿಯ ಸಮೀಪವಿರುವ ಇರಾನ್ನ ಪಾವೆಹ್ ನಗರದಲ್ಲಿ ದಾಳಿಕೋರರು ಇರಾನ್ನ ರೆವೊಲ್ಯುಷನರಿ ಗಾರ್ಡ್ಸ್ ಕಾರ್ಪ್ಸ್ (IRGC)ನ ಇಬ್ಬರು ಸದಸ್ಯರನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ದಾಳಿಯಲ್ಲಿ ಇತರ ಇಬ್ಬರು ಗಾರ್ಡ್ಸ್ ಸದಸ್ಯರು ಗಾಯಗೊಂಡಿದ್ದಾರೆ. ಈ ಘಟನೆಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ವಾಯವ್ಯ ಗಡಿಯಿಂದ ಇರಾನ್ ಪ್ರವೇಶಿಸಿದ್ದ, ಸರ್ಕಾರ ವಿರೋಧಿ ಮತ್ತು ಪ್ರತ್ಯೇಕತಾವಾದಿ ಗುಂಪುಗಳಿಗಾಗಿ ಕೆಲಸ ಮಾಡುತ್ತಿದ್ದ ತಂಡವೊಂದನ್ನು IRGC ಮಟ್ಟಹಾಕಿದ್ದು, ಈ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು 'ಸೆಪಾ ನ್ಯೂಸ್' ವರದಿ ಮಾಡಿದೆ.
Next Story




