ಒಮಾನ್ನಲ್ಲಿ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ: ಅವಶೇಷಗಳು ಬಿದ್ದು ಇಬ್ಬರು ವಿದೇಶಿ ಪ್ರಜೆಗಳು ಮೃತ್ಯು

ಸಾಂದರ್ಭಿಕ ಚಿತ್ರ (PTI)
ಮಸ್ಕತ್: ಒಮಾನ್ ನ ಸೊಹಾರ್ ಪ್ರಾಂತ್ಯದ ಅಲ್–ಅವಾಹಿ ಕೈಗಾರಿಕಾ ಪ್ರದೇಶದಲ್ಲಿ ಡ್ರೋನ್ ಪತನಗೊಂಡ ಪರಿಣಾಮ ಅದರ ಅವಶೇಷ ಬಿದ್ದು ಇಬ್ಬರು ಮೃತಪಟ್ಟಿದ್ದು, ಇತರರು ಗಾಯಗೊಂಡಿದ್ದಾರೆ ಎಂದು ಒಮಾನ್ ನ ಸರಕಾರಿ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ aljazeera.com ವರದಿ ಮಾಡಿದೆ.
ಭದ್ರತಾ ಮೂಲವನ್ನು ಉಲ್ಲೇಖಿಸಿದ ವರದಿಯ ಪ್ರಕಾರ, ಸೊಹಾರ್ ಪ್ರಾಂತ್ಯದ ಅಲ್–ಅವಾಹಿ ಕೈಗಾರಿಕಾ ಪ್ರದೇಶದಲ್ಲಿ ಡ್ರೋನ್ ಪತನಗೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ ಡ್ರೋನ್ ಅವಶೇಷ ಬಿದ್ದು ಇಬ್ಬರು ಮೃತಪಟ್ಟಿದ್ದು, ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಮೃತರಾದ ಇಬ್ಬರೂ ವಿದೇಶಿ ಪ್ರಜೆಗಳು ಎಂದು ಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ, ಸೊಹಾರ್ ಪ್ರಾಂತ್ಯದಲ್ಲಿ ಮತ್ತೊಂದು ಡ್ರೋನ್ ಅನ್ನು ಸಹ ಹೊಡೆದುರುಳಿಸಲಾಗಿದೆ ಎಂದು ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story





