ಸಿರಿಯಾ ಅಧ್ಯಕ್ಷರ ಹತ್ಯೆಯ ಎರಡು ಸಂಚು ವಿಫಲ: ವರದಿ

Photo:REUTERS
ದಮಾಸ್ಕಸ್, ನ.10: ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಕೊಲ್ಲಲು ಐಸಿಸ್ ಉಗ್ರರು ಇತ್ತೀಚಿನ ದಿನಗಳಲ್ಲಿ ನಡೆಸಿದ ಎರಡು ಪಿತೂರಿಯನ್ನು ಸಿರಿಯಾದ ಅಧಿಕಾರಿಗಳು ವಿಫಲಗೊಳಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಸೋಮವಾರ ಶ್ವೇತಭವನದಲ್ಲಿ ಶರಾ ಮತ್ತು ಟ್ರಂಪ್ ನಡುವೆ ನಿಗದಿಯಾಗಿರುವ ಭೇಟಿಗೂ ಕೆಲ ದಿನಗಳ ಹಿಂದೆ ಸಂಚನ್ನು ವಿಫಲಗೊಳಿಸಲಾಗಿದೆ. ಅಹ್ಮದ್ ಅಲ್-ಶರಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಿಗದಿತ ಕಾರ್ಯಕ್ರಮದ ಸಂದರ್ಭ ಒಂದು ದಾಳಿಯನ್ನು ಯೋಜಿಸಲಾಗಿತ್ತು. ಭಯೋತ್ಪಾದಕ ಗುಂಪು ಐಸಿಸ್ ವಿರುದ್ಧ ಅಮೆರಿಕ ನೇತೃತ್ವದ ಒಕ್ಕೂಟಕ್ಕೆ ಸೇರಲು ಸಿರಿಯಾ ಅಧ್ಯಕ್ಷರು ಸಿದ್ಧವಾಗಿರುವಂತೆಯೇ ಅವರ ವಿರುದ್ಧದ ವೈಯಕ್ತಿಕ ಬೆದರಿಕೆ ಹೆಚ್ಚಿರುವುದನ್ನು ಇದು ತೋರಿಸುತ್ತದೆ ಎಂದು ಸಿರಿಯಾದ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
Next Story





