UAE | ಕ್ಷಿಪಣಿ ತಡೆದ ಬಳಿಕ ಅವಶೇಷಗಳು ಬಿದ್ದು ಹಾನಿ: ಅಬುಧಾಬಿಯ ಹಬ್ಶಾನ್ ಅನಿಲ ಸಂಸ್ಕರಣಾ ಘಟಕ ಸ್ಥಗಿತ

ಸಾಂದರ್ಭಿಕ ಚಿತ್ರ | Photo Credit : AP
ಅಬುಧಾಬಿ: ಆಕಾಶದಲ್ಲೇ ಕ್ಷಿಪಣಿಯನ್ನು ತಡೆದ ಬಳಿಕ ಅದರ ಅವಶೇಷಗಳು ಕೆಳಗೆ ಬಿದ್ದು ಹಾನಿಯಾದ ಪರಿಣಾಮ ಅಬುಧಾಬಿಯ ಹಬ್ಶಾನ್ ಅನಿಲ ಸಂಸ್ಕರಣಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ತಿಳಿಸಿದೆ.
ಈ ಘಟನೆಯಿಂದ ಹಬ್ಶಾನ್ ಅನಿಲ ಘಟಕದ ಜೊತೆಗೆ ಬಾಬ್ ತೈಲಕ್ಷೇತ್ರದ ಭಾಗದಲ್ಲಿಯೂ ಹಾನಿಯಾಗಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ.
“ಅನಿಲ ಸಂಸ್ಕರಣಾ ಘಟಕದಲ್ಲಿನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಗಾಯಗಳ ವರದಿ ಬಂದಿಲ್ಲ,” ಎಂದು ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ.
ಕ್ಷಿಪಣಿಯನ್ನು ಆಕಾಶದಲ್ಲೇ ತಡೆದ ವೇಳೆ ಅದರ ತುಂಡುಗಳು ಕೆಳಗೆ ಬಿದ್ದ ಪರಿಣಾಮ ಹಾನಿಯಾಗಿದೆ ಎಂದು ತಿಳಿದುಬಂದಿದ್ದು, ಭದ್ರತಾ ಹಾಗೂ ತಾಂತ್ರಿಕ ತಂಡಗಳು ಸ್ಥಳದಲ್ಲೇ ಪರಿಶೀಲನೆ ನಡೆಸುತ್ತಿವೆ.
Next Story





