ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಇರಾನ್ ನ ಆಸ್ತಿ ಬಿಡುಗಡೆ ಮಾಡಿದ UAE: ವರದಿ

ಸಾಂದರ್ಭಿಕ ಚಿತ್ರ | Photo Credit : magnific.com
ಅಬುಧಾಬಿ, ಆ.13: UAE ಬ್ಯಾಂಕ್ ಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಇರಾನ್ನ 1.5 ಟನ್ ಚಿನ್ನವೂ ಸೇರಿದಂತೆ ಹಲವು ಶತಕೋಟಿ ಡಾಲರ್ ಮೌಲ್ಯದ ಆಸ್ತಿಯನ್ನು UAE ಬಿಡುಗಡೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮುಂಬರುವ ದಿನಗಳಲ್ಲಿ UAE ಮೇಲೆ ಯಾವುದೇ ದಾಳಿ ಮಾಡದಿರಲು ಇರಾನ್ ಒಪ್ಪಿಕೊಂಡಿರುವುದೇ ಈ ಆಸ್ತಿ ಬಿಡುಗಡೆಗೆ ಪ್ರಮುಖ ಕಾರಣ ಎಂದು ವರದಿಗಳು ಪ್ರತಿಪಾದಿಸಿವೆ. ಆಗಸ್ಟ್ 11 ಮತ್ತು 12ರಂದು, UAE ರಾಯಲ್ ಜೆಟ್ ಸಂಸ್ಥೆಯ ಬೋಯಿಂಗ್ ವಿಮಾನದ ಮೂಲಕ ಅಬುಧಾಬಿಯಿಂದ ಟೆಹರಾನ್ನ ಮೆಹ್ರಾಬಾದ್ ವಿಮಾನ ನಿಲ್ದಾಣ ಮತ್ತು ಕರಜ್ನ ಪಯಾಮ್ ವಿಮಾನ ನಿಲ್ದಾಣಗಳಿಗೆ ಈ ಆಸ್ತಿಯನ್ನು ಸಾಗಿಸಲಾಗಿದೆ.
ಆಸ್ತಿಗಳನ್ನು ಬಿಡುಗಡೆ ಮಾಡುವುದರ ಜೊತೆಗೆ, UAE ಸರಕಾರವು ಇರಾನ್ ನ ವಿಮಾನಯಾನ ಸಂಸ್ಥೆಗಳಿಗೆ 15 ಸೆಕೆಂಡ್ ಹ್ಯಾಂಡ್ (ಬಳಸಿದ) ಪ್ರಯಾಣಿಕರ ವಿಮಾನಗಳನ್ನು ಮಾರಾಟ ಮಾಡಲು ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ.
ಈ ವರದಿಯನ್ನು UAE ದೃಢಪಡಿಸಿಲ್ಲ.
Next Story




