Syria ದಲ್ಲಿ ಇಸ್ರೇಲ್ ನ ಅತಿಕ್ರಮಣ; ಯುಎಇ, ಸೌದಿ ಮತ್ತು ಟರ್ಕಿ ಖಂಡನೆ

ಸಾಂದರ್ಭಿಕ ಚಿತ್ರ | Photo Credit : AP , PTI
ಅಂಕಾರ, ಜೂ.30: ದಕ್ಷಿಣ ಸಿರಿಯಾದ ಕುನೈತ್ರಾ ಮತ್ತು ದಾರಾ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸುತ್ತಿರುವ ಅತಿಕ್ರಮಣ ಮತ್ತು ಶೆಲ್ ದಾಳಿಯನ್ನು ಟರ್ಕಿ, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತೀವ್ರವಾಗಿ ಖಂಡಿಸಿವೆ.
"ಸಿರಿಯಾದ ಪ್ರಾದೇಶಿಕ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುವ, ಸಿರಿಯಾದ ಜನರ ಜೀವ ಮತ್ತು ಆಸ್ತಿಪಾಸ್ತಿಗಳನ್ನು ತುಳಿಯುವ ಹಾಗೂ ಈ ಪ್ರದೇಶದ ನಾಗರಿಕರ ಜೀವನವನ್ನು ಹೆಚ್ಚು ಕಷ್ಟಕರವಾಗಿಸುವ ಈ ದಾಳಿಗಳು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಟರ್ಕಿಯ ವಿದೇಶಾಂಗ ಸಚಿವಾಲಯ ಖಂಡಿಸಿದೆ.
ಸೌದಿ ಅರೇಬಿಯಾ ಮತ್ತು ಯುಎಇ ಕೂಡ ಇಸ್ರೇಲಿ ಆಕ್ರಮಣವನ್ನು ಬಲವಾಗಿ ಖಂಡಿಸಿವೆ. ಇಸ್ರೇಲ್ ನ ಅತಿಕ್ರಮಣ ಮತ್ತು ಶೆಲ್ ದಾಳಿಯನ್ನು ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಖಂಡಿಸಿದ್ದು, ಈ ಪ್ರದೇಶದಿಂದ ಇಸ್ರೇಲ್ ಹಿಂದೆ ಸರಿಯಬೇಕೆಂದು ಆಗ್ರಹಿಸಿದ್ದಾರೆ.
Next Story




