ಟಿವಿ ಚಾನೆಲ್ ನಲ್ಲಿ ಕೆಲಸಕ್ಕೆ ಸೇರಿದ ಬ್ರಿಟನ್ ಮಾಜಿ ಪ್ರಧಾನಿ ಜಾನ್ಸನ್

ಬೋರಿಸ್ ಜಾನ್ಸನ್ | Photo : PTI
ಲಂಡನ್: ಜಿಬಿ ನ್ಯೂಸ್ ಚಾನೆಲ್ ನಲ್ಲಿ ನಿರೂಪಕನಾಗಿ ಕೆಲಸ ಮಾಡುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ನಾನು ಈ ಗಮನಾರ್ಹ ಟಿವಿ ಚಾನೆಲ್ ಗೆ ರಶ್ಯದಿಂದ ಚೀನಾದವರೆಗೆ, ಉಕ್ರೇನ್ನಲ್ಲಿನ ಯುದ್ಧದ ಬಗ್ಗೆ ಎಲ್ಲಾ ವಿಷಯಗಳ ಕುರಿತೂ ನನ್ನ ಸರಳವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದೇನೆ. ಇದೊಂದು ನನಗೆ ದೊಡ್ಡ ಅವಕಾಶವಾಗಿದೆ’ ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.
2024ರ ಜನವರಿಯಿಂದ ಬೋರಿಸ್ ಜಾನ್ಸನ್ ಕಾರ್ಯಕ್ರಮ ತಯಾರಕ, ನಿರೂಪಕ ಮತ್ತು ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡಲಿದ್ದಾರೆ ಮತ್ತು ಬ್ರಿಟನ್ ನ ಮುಂದಿನ ಸಾರ್ವತ್ರಿಕ ಚುನಾವಣೆಯ ಕುರಿತ ಕಾರ್ಯಕ್ರಮ ಪ್ರಸಾರದಲ್ಲಿ, ಅಮೆರಿಕ ಚುನಾವಣೆಯ ಕುರಿತ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಜಿಬಿ ನ್ಯೂಸ್ ಹೇಳಿದೆ. ರಾಜಕೀಯ ಪ್ರವೇಶಕ್ಕೂ ಮುನ್ನ ಜಾನ್ಸನ್ ಪತ್ರಕರ್ತರಾಗಿ ಕೆಲಸ ಮಾಡಿದ್ದರು.
Next Story





