ಬ್ರಿಟನ್ ವೀಸಾ ಶುಲ್ಕ ಹೆಚ್ಚಳ ; ಅ.4ರಿಂದ ಜಾರಿ

ಸಾಂಧರ್ಬಿಕ ಚಿತ್ರ | Photo: PTI
ಲಂಡನ್ : ಸಂದರ್ಶಕರು ಮತ್ತು ವಿದ್ಯಾರ್ಥಿಗಳಿಗೆ ಬ್ರಿಟನ್ ವೀಸಾ ಶುಲ್ಕ ಹೆಚ್ಚಳವು ಅಕ್ಟೋಬರ್ 4ರಿಂದ ಜಾರಿಗೆ ಬರಲಿದೆ ಎಂದು ಬ್ರಿಟನ್ ಸರಕಾರ ಶನಿವಾರ ಘೋಷಿಸಿದೆ.
ಆರು ತಿಂಗಳೊಳಗಿನ ಅವಧಿಯ ಸಂದರ್ಶಕ ವೀಸಾಕ್ಕೆ 15 ಪೌಂಡ್ ಹೆಚ್ಚುವರಿ ಶುಲ್ಕ, ವಿದ್ಯಾರ್ಥಿ ವೀಸಾಕ್ಕೆ 127 ಪೌಂಡ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಅಕ್ಟೋಬರ್ 4ರಿಂದ ಜಾರಿಗೆ ಬರಲಿದ್ದು ಭಾರತೀಯರು ಸೇರಿದಂತೆ ವಿಶ್ವದಾದ್ಯಂತದ ಪ್ರಯಾಣಿಕರಿಗೆ ಇದು ಅನ್ವಯಿಸಲಿದೆ ಎಂದು ಸರಕಾರ ಹೇಳಿದೆ.
Next Story