ಉಕ್ರೇನ್: ಗುಂಡಿನ ದಾಳಿಯಲ್ಲಿ ಮಾಜಿ ಸ್ಪೀಕರ್ ಮೃತ್ಯು

ಆಂಡ್ರಿಯ್ ಪರುಬಿಯ್ | PC : PTI
ಕೀವ್, ಆ.30: ಉಕ್ರೇನ್ ನ ಪಶ್ಚಿಮದ ಲಿವಿವ್ ನಗರದಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಉಕ್ರೇನ್ ಸಂಸತ್ ನ ಹಾಲಿ ಸದಸ್ಯ, ಮಾಜಿ ಸ್ಪೀಕರ್ ಆಂಡ್ರಿಯ್ ಪರುಬಿಯ್ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಕೊರಿಯರ್ ಸಂಸ್ಥೆಯ ಸಿಬ್ಬಂದಿಯಂತೆ ನಟಿಸಿದ್ದ ಬಂದೂಕುಧಾರಿ ಪರುಬಿಯ್ ಅವರನ್ನು ಸಮೀಪಿಸಿ ಹಲವು ಸುತ್ತುಗಳ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಪರುಬಿಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಂತಕನ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. 54 ವರ್ಷದ ಪರುಬಿಯ್ 2016ರಿಂದ 2019ರವರೆಗೆ ಉಕ್ರೇನ್ ಸಂಸತ್ತಿನ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.
Next Story





