ರಶ್ಯ ಮೇಲೆ ಉಕ್ರೇನ್ ಡ್ರೋನ್ ಸುರಿಮಳೆ; ತೈಲ ಘಟಕಗಳಲ್ಲಿ ಭಾರೀ ಬೆಂಕಿ

Photo Credit: timesofindia
ಮಾಸ್ಕೊ, ಅ. 18: ರಶ್ಯಾದಾದ್ಯಂತ ಉಕ್ರೇನ್ ರವಿವಾರ ನಡೆಸಿದ ಬೃಹತ್ ವೈಮಾನಿಕ ದಾಳಿಗಳಲ್ಲಿ 1,000ಕ್ಕೂ ಹೆಚ್ಚು ಡ್ರೋನ್ಗಳನ್ನು ಪ್ರಯೋಗಿಸಿದ್ದು, ಸೈಂಟ್ ಪೀಟರ್ಸ್ಬರ್ಗ್ನಲ್ಲಿರುವ ತೈಲ ರಫ್ತು ಟರ್ಮಿನಲ್ವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಈ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಪೀಟರ್ಸ್ಬರ್ಗ್ ಆಯಿಲ್ ಟರ್ಮಿನಲ್ ಮತ್ತು ನಗರದ ತೈಲ ಡಿಪೋ ಎರಡರಲ್ಲೂ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಗವರ್ನರ್ ತಿಳಿಸಿದ್ದಾರೆ.
ಉಕ್ರೇನ್ ನ 1,015 ಡ್ರೋನ್ ಗಳನ್ನು ತಮ್ಮ ಪಡೆಗಳು ನಾಶಪಡಿಸಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯ ರವಿವಾರ ತಿಳಿಸಿದೆ.
ಇನ್ನೊಂದೆಡೆ, ದಕ್ಷಿಣ ಉಕ್ರೇನ್ ನ ಝಪೊರಿಝಿಯಾ ನಗರದ ಮೇಲೆ ರಶ್ಯ ನಡೆಸಿದ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆರು ವರ್ಷದ ಮಗು ಸೇರಿದಂತೆ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Next Story




