ಲಿಬಿಯಾದಲ್ಲಿ ರಶ್ಯಾದ ಯುದ್ಧನೌಕೆಯನ್ನು ಉಕ್ರೇನ್ ಮುಳುಗಿಸಿದೆ : ಝೆಲೆನ್ಸ್ಕಿ

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ | Photo Credit ; AP
ಕೀವ್: ತಮ್ಮ ದೇಶದ ಪಡೆಗಳು ಲಿಬಿಯಾ ಕರಾವಳಿಯಾಚೆ ಡ್ರೋನ್ ದಾಳಿ ನಡೆಸಿ ರಶ್ಯಾ ನೌಕಾಪಡೆಯ ಯುದ್ಧನೌಕೆಯನ್ನು ಮುಳುಗಿಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಚಿತಪಡಿಸಿದ್ದಾರೆ. ಇದರೊಂದಿಗೆ ರಶ್ಯ ಮತ್ತು ಉಕ್ರೇನ್ ನಡುವಿನ ಸುಮಾರು ಐದು ವರ್ಷಗಳ ಯುದ್ಧವು ಯುದ್ಧಭೂಮಿಯಿಂದ ಸಾವಿರಾರು ಕಿಲೋಮೀಟರ್ ದೂರಕ್ಕೆ ವಿಸ್ತರಿಸಿದಂತಾಗಿದೆ.
`ಮಕ್ರ್ಯುರಿ' ಎಂದು ಗುರುತಿಸಲಾದ ಈ ಯುದ್ಧನೌಕೆಯ ಮೇಲೆ ರವಿವಾರ ಪೂರ್ವ ಲಿಬಿಯಾದ ಬೆಂಗಾಝಿ ಬಂದರಿನಲ್ಲಿ ದಾಳಿ ನಡೆಸಲಾಗಿದ್ದು, ಇದರಿಂದ ಭಾರಿ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಉಪಗ್ರಹ ಚಿತ್ರಗಳಲ್ಲಿ ಈ ನೌಕೆಯು ಮಗುಚಿ ಮುಳುಗಿರುವುದು ಕಂಡುಬಂದಿದೆ. ಸೋಮವಾರ ಈ ಕಾರ್ಯಾಚರಣೆಯ ಹೊಣೆಯನ್ನು ಹೊತ್ತುಕೊಂಡ ಝೆಲೆನ್ಸ್ಕಿ, ಉಕ್ರೇನ್ ಪಡೆಗಳು ತನ್ನ ತೀರದಿಂದ 2,700 ಕಿಲೋಮೀಟರ್ಗಳಿಗಿಂತಲೂ ಹೆಚ್ಚು ದೂರದಲ್ಲಿ ಈ ದಾಳಿ ನಡೆಸಲು ದೇಶೀಯವಾಗಿ ತಯಾರಿಸಿದ ನೌಕಾ ಡ್ರೋನ್ಗಳನ್ನು ಬಳಸಿವೆ ಎಂದು ಹೇಳಿದ್ದಾರೆ.




