ಉಕ್ರೇನ್ ಯುದ್ಧ 3ನೇ ಮಹಾಯುದ್ದಕ್ಕೆ ಕಾರಣವಾಗಬಹುದು: ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo : PTI
ವಾಷಿಂಗ್ಟನ್, ಡಿ.12: ರಶ್ಯ ಮತ್ತು ಉಕ್ರೇನ್ ನಡುವೆ ಮುಂದುವರಿದಿರುವ ಯುದ್ದದಲ್ಲಿ ಕಳೆದ ತಿಂಗಳು ಎರಡೂ ಕಡೆ ಸುಮಾರು 25,000 ಮಂದಿ ಸಾವನ್ನಪ್ಪಿದ್ದು ಇದು ಮಹಾ ಯುದ್ಧವಾಗಿ ಉಲ್ಬಣಿಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಈ ಹತ್ಯೆಗಳು ನಿಲ್ಲಬೇಕು. ಇಂತಹ ವಿಷಯಗಳು ವಿಶ್ವಯುದ್ದವಾಗಿ ಕೊನೆಗೊಳ್ಳುತ್ತದೆ. ಉಕ್ರೇನ್ ನಲ್ಲಿನ ಯುದ್ದವನ್ನು ನಿಲ್ಲಿಸಲು ಅಮೆರಿಕ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದೆ. ಆದರೆ ಈ ಯುದ್ಧದಲ್ಲಿ ನಾವು ಒಳಗೊಂಡಿಲ್ಲ. ಕೇವಲ ಮಧ್ಯಸ್ಥಿಕೆ ವಹಿಸುತ್ತಿದ್ದೇವೆ ಎಂದು ಶ್ವೇತಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ.
Next Story





