ರಶ್ಯದ ಮೇಲೆ ಉಕ್ರೇನ್ ಡ್ರೋನ್ ಸುರಿಮಳೆ: ವಾಯುನೆಲೆಗೆ ಬೆಂಕಿ

Photo : X/@clashreport
ಕೀವ್: ರಶ್ಯದ ಮೇಲೆ ಉಕ್ರೇನ್ ರವಿವಾರ ಡ್ರೋನ್ ಗಳ ಸುರಿಮಳೆಗರೆದಿದ್ದು ರಶ್ಯದ 4 ವಾಯುನೆಲೆಗಳು ಹಾಗೂ ಸುಮಾರು 40 ಯುದ್ಧವಿಮಾನಗಳನ್ನು ಗುರಿಯಾಗಿಸಿರುವುದಾಗಿ ವರದಿಯಾಗಿದೆ.
ಉಕ್ರೇನ್ ನಿಂದ ಸುಮಾರು 4,300 ಕಿ.ಮೀ ದೂರವಿರುವ ರಶ್ಯದ ಇರ್ಕುಟ್ಸ್ಕ್ ಒಬ್ಲಾಸ್ಟ್ ನಗರದ ಬೆಲಾಯಾ ವಾಯುನೆಲೆಯನ್ನು ಗುರಿಯಾಗಿಸಿ ನಡೆದ ದಾಳಿಯ ಬಳಿಕ ವಾಯುನೆಲೆಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಮತ್ತು ಹೊಗೆಯ ಕಾರ್ಮೋಡ ವ್ಯಾಪಿಸಿದೆ. `ಉಕ್ರೇನ್ ಸೆಕ್ಯುರಿಟಿ ಸರ್ವಿಸ್(ಎಸ್ಬಿಯು) ನಡೆಸಿದ ದಾಳಿಯಲ್ಲಿ ರಶ್ಯದ 40 ಯುದ್ಧವಿಮಾನಗಳಿಗೆ ಹಾನಿಯಾಗಿದ್ದು ಸುಮಾರು 2 ಶತಕೋಟಿ ಡಾಲರ್ ನಷ್ಟ ಅಂದಾಜಿಸಲಾಗಿದೆ ಎಂದು ಉಕ್ರೇನ್ ನ ಉನ್ನತ ಮೂಲಗಳು ಹೇಳಿವೆ.
Next Story





