ರಶ್ಯಾಗೆ ಅಮೆರಿಕ ತಂಡದ ಭೇಟಿಯು ಉಕ್ರೇನ್ಗೆ ಮಾಡಿರುವ ಅವಮಾನ: ಝೆಲೆನ್ಸ್ಕಿ ಆಕ್ರೋಶ

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ | Photo Credit ; AP
ಕೀವ್, ಎ.21: ಅಮೆರಿಕದ ಉನ್ನತ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜರೆಡ್ ಕುಷ್ನರ್ ರಷ್ಯಕ್ಕೆ ಹಲವು ಭಾರಿ ಭೇಟಿ ನೀಡಿದ್ದರೂ ಉಕ್ರೇನ್ಗೆ ಒಂದು ಬಾರಿಯೂ ಅಧಿಕೃತ ಭೇಟಿ ನೀಡದಿರುವುದು ಉಕ್ರೇನ್ಗೆ ಮಾಡಿರುವ ಘೋರ ಅವಮಾನವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಷ್ಯ-ಉಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ತ್ರಿಪಕ್ಷೀಯ ಮಾತುಕತೆಯ(ಅಮೆರಿಕ, ರಷ್ಯ ಮತ್ತು ಉಕ್ರೇನ್) ಚೌಕಟ್ಟಿನ ಬಗ್ಗೆ ಚರ್ಚಿಸಲು ವಿಟ್ಕಾಫ್ ಮತ್ತು ಕುಷ್ನರ್ ಡಿಸೆಂಬರ್ ಮತ್ತು ಜನವರಿಯಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದರು. ಆ ಬಳಿಕ ವಿಟ್ಕಾಫ್ ಸುಮಾರು 8 ಬಾರಿ ಮಾಸ್ಕೋಗೆ ಭೇಟಿ ನೀಡಿದ್ದಾರೆ. ಆದರೆ ಒಮ್ಮೆಯೂ ಉಕ್ರೇನ್ಗೆ ಭೇಟಿ ನೀಡದಿರುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಉಕ್ರೇನ್ ಒಳಗೊಳ್ಳದ ಕದನ ವಿರಾಮ ಮಾತುಕತೆಯಲ್ಲಿ ಅರ್ಥವಿಲ್ಲ ಎಂದು ಝೆಲೆನ್ಸ್ಕಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
Next Story




