ಆಶ್ರಯ ಹುಡುಕುವುದು ಸಾರ್ವತ್ರಿಕ ಮಾನ್ಯತೆ ಪಡೆದ ಹಕ್ಕು: ವಿಶ್ವಸಂಸ್ಥೆ

ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ: ಎಲ್ಲಾ ನಿರಾಶ್ರಿತರ ಪ್ರವೇಶವನ್ನು ನಿಲ್ಲಿಸುವ ಮತ್ತು ಅಮೆರಿಕ ಆಶ್ರಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯು `ಆಶ್ರಯ ಹುಡುಕುವುದು ಸಾರ್ವತ್ರಿಕ ಮಾನ್ಯತೆ ಪಡೆದ ಹಕ್ಕು' ಎಂದು ಹೇಳಿದೆ.
ಜಿನೆವಾದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿ ವಕ್ತಾರೆ ರವೀನಾ ಶಮ್ದಾಸಾನಿ ` ಎಲ್ಲಾ ದೇಶಗಳೂ ತಮ್ಮ ಅಂತರಾಷ್ಟ್ರೀಯ ಗಡಿಗಳಲ್ಲಿ ತಮ್ಮ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ಅರ್ಹವಾಗಿವೆ. ಅವರು ತಮ್ಮ ಮಾನವ ಹಕ್ಕುಗಳ ಕಟ್ಟುಪಾಡುಗಳಿಗೆ ಅನುಗುಣವಾಗಿ ಹಾಗೆ ಮಾಡಬೇಕಾಗುತ್ತದೆ. ಅಶ್ರಯ ಹುಡುಕುವುದು ಸಾರ್ವತ್ರಿಕವಾಗಿ ಮಾನ್ಯತೆ ಪಡೆದ ಮಾನವ ಹಕ್ಕಾಗಿದೆ' ಎಂದು ಹೇಳಿದ್ದಾರೆ.
Next Story





