ಉಲ್ಬಣಗೊಂಡ ಇರಾನ್ - ಇಸ್ರೇಲ್ ಸಂಘರ್ಷ; ಶುಕ್ರವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ

ಸಾಂದರ್ಭಿಕ ಚಿತ್ರ PC: x.com/QudsNen
ನ್ಯೂಯಾರ್ಕ್: ಇಸ್ರೇಲ್-ಇರಾನ್ ಸಂಘರ್ಷದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಬೆಳಿಗ್ಗೆ ನ್ಯೂಯಾರ್ಕ್ ನಲ್ಲಿ ತುರ್ತು ಸಭೆ ನಡೆಸಲಿದೆ ಎಂದು Aljazeera ವರದಿ ಮಾಡಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಮೆರಿಕವು ಹಸ್ತಕ್ಷೇಪ ಮಾಡುತ್ತಿರುವುದರಿಂದ ಪರಿಸ್ಥಿತಿಯು ಅಪಾಯಕಾರಿಯಾಗಿ ಉಲ್ಬಣಗೊಂಡಿದೆ ಎಂದು ಇರಾನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಗೆ ಈ ಹಿಂದೆ ವಿನಂತಿಸಿತ್ತು.
ಇರಾನ್ ನ ವಿನಂತಿಯನ್ನು ರಷ್ಯಾ, ಚೀನಾ, ಪಾಕಿಸ್ತಾನ ಮತ್ತು ಅಲ್ಜೀರಿಯಾ ಬೆಂಬಲಿಸಿವೆ.
Next Story





