United States : ನಿರ್ಬಂಧ ಹೇರಿಕೆ ಪ್ರಶ್ನಿಸಿ ಟ್ರಂಪ್ ಆಡಳಿತದ ವಿರುದ್ಧ ಐಸಿಜೆ ನ್ಯಾಯಾಧೀಶರಿಂದ ಮೊಕದ್ದಮೆ

ಡೊನಾಲ್ಡ್ ಟ್ರಂಪ್ | Photo Credit: PTI
ನ್ಯೂಯಾರ್ಕ್,ಜೂ.24: ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಜೆ)ದ ನ್ಯಾಯಾಧೀಶರುಗಳ ವಿರುದ್ಧ ಕಳೆದ ವರ್ಷ ವಿಧಿಸಿದ ನಿರ್ಬಂಧಗಳು ಅಕ್ರಮವೆಂದು ಆರೋಪಿಸಿ ನ್ಯಾಯಾಧೀಶರುಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಆಡಳಿತದ ವಿರುದ್ಧ ಬುಧವಾರ ಮೊಕದ್ದಮೆ ದಾಖಲಿಸಿದ್ದಾರೆ. ಕೆನಡಾದ ಕಿಂಬರ್ಲಿ ಪ್ರೊಸ್ಟ್, ಉಂಗಾಂಡದ ಸೊಲೊಮಿ ಬಾಲುಂಗಿ ಬೊಸ್ಸಾ ಹಾಗೂ ಬೆನಿನ್ನ ರೈನೆ ಅಡಿಲೇಡ್ ಸೋಫಿ ಅಲಾಪಿನಿ ಗಾನ್ಸು ಅವರು ನ್ಯೂಯಾರ್ಕ್ ಮ್ಯಾನ್ಹಟ್ಟನ್ನಲ್ಲಿರುವ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ ಬಂಧನ ವಾರಂಟ್ಗೆ ಹಾಗೂ ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳು ಎಸಗಿದ್ದವೆನ್ನಲಾದ ಯುದ್ಧಪರಾಧಗಳ ಬಗ್ಗೆ ತನಿಖೆಗೆ ಆದೇಶಿಸಿರುವುದಕ್ಕೆ ಪ್ರತೀಕಾರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ನಿರ್ಬಂಧಗಳನ್ನು ಹೇರಿತ್ತು. ಈ ನ್ಯಾಯಾಧೀಶರುಗಳ ಅಮೆರಿಕದಲ್ಲಿನ ಆಸ್ತಿಗಳನ್ನು ಸ್ತಂಭನಗೊಳಿಸಿತ್ತಲ್ಲದೆ ಅವರಿಗೆ ಸೇವೆ ಅಥವಾ ಹಣವನ್ನು ಒದಗಿಸುವ ಅಮೆರಿಕ ಮೂಲದ ಸಂಸ್ಥೆಗಳನ್ನು ನಿಷೇಧಿಸಿತ್ತು.




