‘ಇರಾನ್ ಬಳಿ ಅಣ್ವಸ್ತ್ರ ತಯಾರಿಕೆಗೆ ಸಾಕಾಗುವಷ್ಟು ಯುರೇನಿಯಂ ದಾಸ್ತಾನು ಇನ್ನೂ ಇದೆ': ವರದಿ

PC : PTI
ಟೆಹರಾನ್: ಇರಾನ್ ನ ಭೂಗತ ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿಯ ಹೊರತಾಗಿಯೂ ಆ ದೇಶದ ಬಳಿ ಅಣ್ವಸ್ತ್ರಗಳನ್ನು ತಯಾರಿಸಲು ಬೇಕಾದ ಸಂವರ್ಧಿತ ಯುರೇನಿಯಂನ ದಾಸ್ತಾನು ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಉಳಿದುಕೊಂಡಿದೆ. ‘ಆಟ ಇನ್ನೂ ಮುಗಿದಿಲ್ಲ’ ಎಂದು ಇರಾನಿನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರ ನಿಕಟವರ್ತಿಯೊಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ತನ್ನ ಅಣುಸ್ಥಾವರ ನೆಲೆಗಳ ಮೇಲೆ ಇಸ್ರೇಲ್ ಹಾಗೂ ಇರಾನ್ ದಾಳಿಗಳನ್ನು ನಡೆಸಿದ ಆನಂತರವೂ ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿರುವುದಾಗಿ ಇರಾನ್ ಸರಕಾರ ತಿಳಿಸಿದೆ.
ಅಣುಸ್ಥಾವರಗಳನ್ನು ಪುನಾರಂಭಿಸುವ ಯೋಜನೆಯನ್ನು ಮುಂಚಿತವಾಗಿಯೇ ಇರಾನ್ ರೂಪಿಸಿದೆ. ಅಣ್ವಸ್ತ್ರ ತಯಾರಿಗೆ ಬಳಸಲಾಗುವಂತಹ 400 ಕೆ.ಜಿ. ಸಂವರ್ಧಿತ ಯುರೇನಿಯಂ ಇನ್ನೂ ಇರಾನ್ ಬಳಿ ಇದೆಯೆಂಬ ವರದಿಗಳ ಬಳಿಕ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರು ಈಬಗ್ಗೆ ಇರಾನಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
Next Story