ಇರಾನ್ ನ ಪರಮಾಣು ನೆಲೆಗಳ ಮೇಲೆ ಅಮೆರಿಕಾದಿಂದ ದಾಳಿ; ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಇಂದು ತುರ್ತು ಸಭೆ

PC : news.un.org
ನ್ಯೂಯಾರ್ಕ್: ಇರಾನ್ ನ ಪರಮಾಣು ನೆಲೆಗಳ ಮೇಲೆ ಅಮೆರಿಕಾವು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಇಂದು ತುರ್ತು ಸಭೆ ನಡೆಯಲಿದೆ ಎಂದು Aljazeera ವರದಿ ಮಾಡಿದೆ.
ತನ್ನ ಮೇಲೆ ಅಮೆರಿಕ ದಾಳಿ ನಡೆಸುವುದರಿಂದ ತುರ್ತು ಸಭೆ ನಡೆಸಬೇಕೆಂದು ಇರಾನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಕೋರಿತ್ತು. ಇದನ್ನು ತುರ್ತು ಎಂದು ಭಾವಿಸಿದ ವಿಶ್ವಸಂಸ್ಥೆಯು ಭಾರತೀಯ ಕಾಲಮಾನ ಇಂದು ಮಧ್ಯರಾತ್ರಿ 12:30 ಸುಮಾರಿಗೆ ಭದ್ರತಾ ಮಂಡಳಿಯ ಸಭೆ ಕರೆದಿದೆ.
ಅಮೆರಿಕವು ಇರಾನಿನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದ್ದನ್ನು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೋ ಗುಟೆರಸ್ ತೀವ್ರವಾಗಿ ಖಂಡಿಸಿದ್ದರು. ಮಧ್ಯ ಪ್ರಾಚ್ಯದ ಸಂಘರ್ಷಕ್ಕೆ ಅಮೆರಿಕಾದ ಪ್ರವೇಶವು ತೀವ್ರ ಕಳವಳಕಾರಿ ಎಂದು ಅವರು ಬಣ್ಣಿಸಿದ್ದರು.
Next Story





