ಪ್ರತಿಭಾವಂತ ಭಾರತೀಯರಿಂದ ಅಮೆರಿಕಾ ಅಪಾರ ಪ್ರಯೋಜನ ಪಡೆದಿದೆ: ಎಲಾನ್ ಮಸ್ಕ್

Photo: Screengrab
ವಾಷಿಂಗ್ಟನ್, ನ.30: ಹಲವು ದಶಕಗಳಿಂದ ಪ್ರತಿಭಾವಂತ ಭಾರತೀಯರ ಆಗಮನದಿಂದ ಅಮೆರಿಕಾ ಅಗಾಧ ಪ್ರಯೋಜನವನ್ನು ಪಡೆದಿದೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದು ಅಮೆರಿಕಾದ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರವನ್ನು ರೂಪಿಸುವಲ್ಲಿ ವಲಸಿಗ ಪ್ರತಿಭೆಗಳ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.
ಝೆರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಪೋಡ್ಕಾಸ್ಟ್ ಸಂವಾದದ ಸಂದರ್ಭ ಮಸ್ಕ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕಾವು ಬಹಳ ಹಿಂದಿನಿಂದಲೇ ಪ್ರಪಂಚದಾದ್ಯಂತದ ಬುದ್ಧಿವಂತ ಜನರನ್ನು ಆಕರ್ಷಿಸಿದೆ. ಭಾರತದಲ್ಲಿ ಇದನ್ನು `ಪ್ರತಿಭಾ ಪಲಾಯನ' ಎಂದು ಕರೆಯುತ್ತಾರೆ. ನಮ್ಮ ಎಲ್ಲಾ ಭಾರತೀಯ ಮೂಲದ ಸಿಇಒ ಗಳು ಪಾಶ್ಚಿಮಾತ್ಯ ಕಂಪನಿಗಳಿದ್ದಾರೆ ಎಂದು ಸಂವಾದ ಆರಂಭಿಸಿದ ಕಾಮತ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್ ` ದೇಶದ ಬೆಳವಣಿಗೆಯಲ್ಲಿ ಭಾರತೀಯ ಪ್ರತಿಭೆಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಹೌದು ಅಮೆರಿಕಾಕ್ಕೆ ಬಂದಿರುವ ಪ್ರತಿಭಾವಂತ ಭಾರತೀಯರಿಂದ ಅಮೆರಿಕಾ ಅಪಾರ ಪ್ರಯೋಜನ ಪಡೆದಿರುವುದಾಗಿ ಭಾವಿಸುತ್ತೇನೆ' ಎಂದಿದ್ದಾರೆ.





