ಅಮೆರಿಕ- ಕೆನಡಾ ವ್ಯಾಪಾರ ಒಪ್ಪಂದ ವಿಫಲ: 50% ಸುಂಕ ಜಾರಿಗೆ ಟ್ರಂಪ್ ನಿರ್ಧಾರ

ಮಾರ್ಕ್ ಕಾರ್ನೆ , ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಅಮೆರಿಕ ಮತ್ತು ಕೆನಡಾ ನಡುವಿನ ಅಂತಿಮ ಹಂತದ ವ್ಯಾಪಾರ ಮಾತುಕತೆಗಳು ವಿಫಲವಾದ ನಂತರ, ಅಮೆರಿಕವು ಸುಮಾರು 20 ಶತಕೋಟಿ ಡಾಲರ್ ಮೌಲ್ಯದ ಕೆನಡಾದ ಸರಕುಗಳ ಮೇಲೆ 50% ಸುಂಕವನ್ನು ವಿಧಿಸಲು ನಿರ್ಧರಿಸಿದೆ.
ಈ ಹೊಸ ಸುಂಕಗಳು ಕೆನಡಾದಿಂದ ಅಮೆರಿಕಕ್ಕೆ ಆಗುವ ವಾರ್ಷಿಕ ರಫ್ತಿನ ಶೇಕಡಾ 5 ರಷ್ಟು ಭಾಗದ ಮೇಲೆ ಪರಿಣಾಮ ಬೀರಲಿದ್ದು, ಹಾಕಿ ಸ್ಟಿಕ್ಗಳಿಂದ ಹಿಡಿದು ಟಂಗ್ ಡಿಪ್ರೆಸರ್ಗಳವರೆಗಿನ (ನಾಲಿಗೆಯನ್ನು ಒತ್ತಿ ಹಿಡಿಯಲು ವೈದ್ಯರು ಬಳಸುವ ಉಪಕರಣ) ಸರಕುಗಳನ್ನು ಒಳಗೊಳ್ಳಲಿವೆ.
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಅವರು `ಕೆನಡಾದ ಕಾರ್ಮಿಕರು ಮತ್ತು ಉದ್ಯಮಗಳನ್ನು ರಕ್ಷಿಸಲು ಅಮೆರಿಕದ ಸುಂಕಗಳಿಗೆ `ಡಾಲರ್ಗೆ ಡಾಲರ್' ರೀತಿಯಲ್ಲಿಯೇ ಸಮನಾಗಿ ಪ್ರತ್ಯುತ್ತರ ನೀಡಲಾಗುವುದು' ಎಂದು ಘೋಷಿಸಿದ್ದಾರೆ.
Next Story




