ಇರಾನ್ ಅಧ್ಯಕ್ಷರ ಸಂವಹನ ತಂಡಕ್ಕೆ ಅಮೆರಿಕ ವೀಸಾ ನಿರಾಕರಣೆ : ವರದಿ

ಮಸೂದ್ ಪೆಝೆಶ್ಕಿಯನ್ | Photo Credit : X
ಟೆಹರಾನ್: ಈ ವಾರ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಸಭೆಗಾಗಿ ತೆರಳಬೇಕಿದ್ದ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಅವರ ನಿಯೋಗದ ಸದಸ್ಯರು ಹಾಗೂ ಅವರ ಸಂವಹನ ತಂಡಕ್ಕೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ ಎಂದು ಇರಾನ್ನ ಸರಕಾರಿ ಸ್ವಾಮ್ಯದ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಅಮೆರಿಕ ಸರಕಾರದ ಹಗೆತನದ ಕ್ರಮದಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಅಧ್ಯಕ್ಷರ ಉನ್ನತ ಮಟ್ಟದ ನಿಯೋಗದ ಕೆಲವು ಸದಸ್ಯರಿಗೆ ಹಾಗೂ ಅವರ ಸಂವಹನ ತಂಡಕ್ಕೆ ಅಮೆರಿಕ ವೀಸಾವನ್ನು ನಿರಾಕರಿಸಿದ್ದಾರೆ ಎಂದು `ಐಆರ್ಎನ್ಎ' ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೆಝೆಶ್ಕಿಯನ್ ಬುಧವಾರ ವಿಶ್ವಸಂಸ್ಥೆಯ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿ ತಿಳಿಸಿದೆ.
Next Story




