ಮಧ್ಯಪ್ರಾಚ್ಯಕ್ಕೆ 10,000 ಹೆಚ್ಚುವರಿ ಸೈನಿಕರು | ಮೂರನೇ ವಿಮಾನವಾಹಕ ನೌಕೆ ನಿಯೋಜಿಸಿದ ಅಮೆರಿಕ

ಸಾಂದರ್ಭಿಕ ಚಿತ್ರ | Photo Credit : NDTV
ವಾಶಿಂಗ್ಟನ್, ಅ. 2: ನವೆಂಬರ್ 3ರ ಮಧ್ಯಂತರ ಚುನಾವಣೆಯ ನಂತರ ಇರಾನ್ ಹೊಸ ದಾಳಿಗಳನ್ನು ಎದುರಿಸಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ನಂತರ, ಅಮೆರಿಕ ಹೆಚ್ಚುವರಿಯಾಗಿ 9,000ರಿಂದ 10,000 ಸೈನಿಕರೊಂದಿಗೆ ಮೂರನೇ ವಿಮಾನವಾಹಕ ನೌಕೆಯನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸುತ್ತಿದೆ.
ಹೆಚ್ಚುವರಿ ಸೈನಿಕರನ್ನು ಹೊತ್ತೊಯ್ಯುತ್ತಿರುವ ಯುಎಸ್ಎಸ್ ಥಿಯೋಡೋರ್ ರೂಸ್ವೆಲ್ಟ್ ಮತ್ತು ಅದರ ಸಹ ನೌಕೆಗಳು ನವೆಂಬರ್ ಅಂತ್ಯದ ವೇಳೆಗೆ ಮಧ್ಯಪ್ರಾಚ್ಯವನ್ನು ತಲುಪುವ ನಿರೀಕ್ಷೆಯಿದೆ. ಈಗಾಗಲೇ ಯುಎಸ್ಎಸ್ ಜಾರ್ಜ್ ಎಚ್. ಡಬ್ಲ್ಯು. ಬುಷ್ ಮತ್ತು ಯುಎಸ್ಎಸ್ ಜಾರ್ಜ್ ವಾಷಿಂಗ್ಟನ್ ಎಂಬ ಎರಡು ಯುಎಸ್ ವಿಮಾನವಾಹಕ ನೌಕೆಗಳು ಈ ಪ್ರದೇಶದಲ್ಲಿ ನಿಯೋಜನೆಗೊಂಡಿವೆ.
ಈ ಇತ್ತೀಚಿನ ನಿಯೋಜನೆಯಿಂದಾಗಿ ನೂರಾರು ಯುದ್ಧ ವಿಮಾನಗಳೊಂದಿಗೆ ಈ ಪ್ರದೇಶದಲ್ಲಿರುವ ಅಮೆರಿಕದ ನಾವಿಕರು ಮತ್ತು ನೌಕಾ ಸೈನಿಕರ ಸಂಖ್ಯೆ 20,000ಕ್ಕೂ ಅಧಿಕವಾಗಲಿದೆ.
Next Story




