ಫೆಡರಲ್ ಮತದಾನದ ಫಾರ್ಮ್ ನಲ್ಲಿ ಪೌರತ್ವ ಪುರಾವೆಯ ಅಗತ್ಯವಿಲ್ಲ: ಅಮೆರಿಕ ಜಿಲ್ಲಾ ನ್ಯಾಯಾಧೀಶರ ತೀರ್ಪು

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ನ.2: ಫೆಡರಲ್ ಮತದಾರರ ನೋಂದಣಿ ಫಾರ್ಮ್ ನಲ್ಲಿ ಪೌರತ್ವ ಪುರಾವೆಯ ದಾಖಲೆಯನ್ನು ಸೇರಿಸಬೇಕೆಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋರಿಕೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ವಾಷಿಂಗ್ಟನ್ ಜಿಲ್ಲಾ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅಮೆರಿಕದ ಚುನಾವಣೆಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಟ್ರಂಪ್ ಆಡಳಿತದ ಕಾರ್ಯಕಾರಿ ಆದೇಶವನ್ನು ಪ್ರಶ್ನಿಸಿ ಡೆಮಾಕ್ರಟಿಕ್ ಪಕ್ಷ ಹಾಗೂ ನಾಗರಿಕ ಹಕ್ಕುಗಳ ಗುಂಪುಗಳು ಮೊಕದ್ದಮೆ ದಾಖಲಿಸಿದ್ದವು. ಪೌರತ್ವದ ಪುರಾವೆ ಒದಗಿಸಲು ನಿರ್ದೇಶಿಸುವುದು ಅಧಿಕಾರದ ಪ್ರತ್ಯೇಕತೆಯ ಅಸಾಂವಿಧಾನಿಕ ಉಲ್ಲಂಘನೆಯಾಗಿದೆ. ನಮ್ಮ ಸಂವಿಧಾನವು ರಾಜ್ಯಗಳು ಮತ್ತು ಸಂಸತ್ತಿಗೆ ಚುನಾವಣಾ ನಿಯಂತ್ರಣದ ಜವಾಬ್ದಾರಿಯನ್ನು ನಿಯೋಜಿಸಿರುವುದರಿಂದ ಅದರಲ್ಲಿ ಬದಲಾವಣೆ ತರಲು ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಅಮೆರಿಕಾದ ಚುನಾವಣೆಗಳಲ್ಲಿ ಅಮೆರಿಕನ್ನರು ಮಾತ್ರ ಮತ ಚಲಾಯಿಸುತ್ತಿದ್ದಾರೆ ಎಂಬ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಇಂತಹ ಆದೇಶಗಳು ಅಗತ್ಯವಾಗಿದೆ ಎಂದು ಟ್ರಂಪ್ ಆಡಳಿತ ವಾದಿಸಿತ್ತು.





