ಇರಾನ್ನ ಇಸ್ಫಹಾನ್ನಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಣಾಗಾರದ ಮೇಲೆ 907 ಕೆಜಿ ಬಂಕರ್ ಬಸ್ಟರ್ ಬಾಂಬ್ ದಾಳಿ ನಡೆಸಿದ ಅಮೆರಿಕ; ವರದಿ

Screengrab: truthsocial.com/@realDonaldTrump
ಟೆಹ್ರಾನ್: ಅಮೆರಿಕ ಮಿಲಿಟರಿಯು ಇಸ್ಫಹಾನ್ನಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಣಾಗಾರದ ಮೇಲೆ 2,000 ಪೌಂಡ್(ಸುಮಾರು 907 ಕೆಜಿ) ಬಂಕರ್ ಬಸ್ಟರ್ ಬಾಂಬ್ ನಿಂದ ದಾಳಿ ನಡೆಸಿದೆ. ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ "ಪೆನೆಟ್ರೇಟರ್ ಮದ್ದುಗುಂಡುಗಳನ್ನು" ಬಳಸಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ Wall Street Journal ವರದಿ ಮಾಡಿದೆ.
ಇದಕ್ಕೂ ಮೊದಲು ಇಸ್ಫಹಾನ್ನಲ್ಲಿ ಸ್ಫೋಟ ಸಂಭವಿಸಿರುವ ಕುರಿತು ಟ್ರಂಪ್ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಸ್ಫೋಟಗಳು ಯಾವಾಗ ಅಥವಾ ಎಲ್ಲಿ ಸಂಭವಿಸಿದೆ ಎಂಬುದರ ಬಗ್ಗೆ ಟ್ರಂಪ್ ಯಾವುದೇ ವಿವರವನ್ನು ನೀಡಿರಲಿಲ್ಲ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಮಂಗಳವಾರ ಟೆಹ್ರಾನ್ ನ ವಿವಿಧ ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು Aljazeera ವರದಿ ಮಾಡಿದೆ.
🚨 BREAKING: President Trump just posted a video of MASSIVE explosions in Isfahan, Iran following what’s believed to be U.S.-Israeli airstrikes
— Nick Sortor (@nicksortor) March 31, 2026
We clearly hit something pretty big… pic.twitter.com/3rg7aGkeEF






