ಅಮೆರಿಕ: ಒಂದು ಮೊಟ್ಟೆಯ ಬೆಲೆ 36 ರೂ.ಗೆ ಏರಿಕೆ!

ವಾಷಿಂಗ್ಟನ್: ಅಮೆರಿಕದಲ್ಲಿ ಹಕ್ಕಿ ಜ್ವರ ಉಲ್ಬಣಿಸುತ್ತಿರುವ ನಡುವೆಯೇ ಮೊಟ್ಟೆಯ ಬೆಲೆ ಗಗನಕ್ಕೇರಿದ್ದು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸರಕಾರ ಮಾಹಿತಿ ನೀಡಿದೆ.
ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ಜನವರಿಯಲ್ಲಿ ಅಮೆರಿಕದ ಪ್ರಮುಖ ನಗರಗಳಲ್ಲಿ ಒಂದು ಡಜನ್ `ಎ'ಗ್ರೇಡ್ ಮೊಟ್ಟೆಯ ಬೆಲೆ 4.95 ಡಾಲರ್(ಭಾರತದ ಕರೆನ್ಸಿ ಪ್ರಕಾರ ಸುಮಾರು 431 ರೂಪಾಯಿ) ಗೆ ಏರಿಕೆಯಾಗಿದ್ದು ಇದು ದಾಖಲೆಯಾಗಿದೆ. 2 ವರ್ಷದ ಹಿಂದೆ ಡಜನ್ ಮೊಟ್ಟೆಯ ಬೆಲೆ ಸರಾಸರಿ 4.82 ಡಾಲರ್ ಗೆ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
Next Story





