`ವರ್ಕ್ ಪರ್ಮಿಟ್' ವಿಸ್ತರಣೆ ಅಂತ್ಯಗೊಳಿಸಿದ ಅಮೆರಿಕ: ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿ ಉದ್ಯೋಗಿಗಳಿಗೆ ಸಂಕಷ್ಟ

ಸಾಂದರ್ಭಿಕ ಚಿತ್ರ (AI)
ವಾಶಿಂಗ್ಟನ್: ಎಚ್-1ಬಿ ಉದ್ಯೋಗಿಗಳು ಮತ್ತು ಅವರ ಸಂಗಾತಿಗಳಿಗೆ ಎದುರಾದ ಹೊಸ ಹಿನ್ನಡೆಯೊಂದರಲ್ಲಿ, ಅಮೆರಿಕ ಹಲವು ವರ್ಗಗಳ ವಲಸಿಗರಿಗೆ ನೀಡಲಾಗುತ್ತಿದ್ದ 540 ದಿನಗಳ ಸ್ವಯಂಚಾಲಿತ ವರ್ಕ್ ಪರ್ಮಿಟ್ ವಿಸ್ತರಣೆಯನ್ನು ಅಂತ್ಯಗೊಳಿಸಿದೆ. ಈ ಕ್ರಮದಿಂದಾಗಿ ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿ ಉದ್ಯೋಗಿಗಳು ತಮ್ಮ ನವೀಕರಣ (ರಿನ್ಯೂವಲ್) ಅರ್ಜಿಗಳು ಬಾಕಿ ಇರುವಾಗ ಕೆಲಸ ಮಾಡಲು ಸಾಧ್ಯವಾಗದೆ ತೊಂದರೆಗೆ ಸಿಲುಕಬಹುದು ಎಂದು ಪಿಟಿಐ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ(ಯುಎಸ್ಸಿಐಎಸ್) ಈ ಬದಲಾವಣೆಯನ್ನು ಅಧಿಕೃತಗೊಳಿಸಿದೆ. ಕಳೆದ ವರ್ಷ ಅಕ್ಟೋಬರ್ 30ರಂದು ಮಧ್ಯಂತರ ನಿಯಮದ ಮೂಲಕ ತರಲಾಗಿದ್ದ ಈ ನೀತಿಯನ್ನು ಈ ಕ್ರಮ ಜಾರಿಗೆ ತರುತ್ತದೆ. ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಅಧಿಕಾರಾವಧಿಯಲ್ಲಿ ಮೇ 2022ರಲ್ಲಿ 540 ದಿನಗಳ ಸ್ವಯಂಚಾಲಿತ ವಿಸ್ತರಣೆಯನ್ನು ಪರಿಚಯಿಸಲಾಯಿತು. ಆದರೆ, ಇತ್ತೀಚಿನ ಈ ನಿಯಮವು ಹಲವು ವರ್ಗದ ಅರ್ಜಿದಾರರಿಗೆ ಸ್ವಯಂಚಾಲಿತ ವಿಸ್ತರಣೆಯನ್ನು ಕೊನೆಗೊಳಿಸುತ್ತದೆ.
Next Story




