ಪೂರ್ವ ಪೆಸಿಫಿಕ್ ನಲ್ಲಿ ಹಡಗಿನ ಮೇಲೆ ಅಮೆರಿಕಾ ಪಡೆ ದಾಳಿ: 4 ಮಂದಿ ಸಾವು

Screengrab : X \ @Southcom
ವಾಷಿಂಗ್ಟನ್, ಡಿ. 18: ಪೂರ್ವ ಪೆಸಿಫಿಕ್ ನಲ್ಲಿ ಮಾದಕ ವಸ್ತು ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿದ್ದ ಹಡಗಿನ ಮೇಲೆ ಅಮೆರಿಕದ ಪಡೆ ನಡೆಸಿದ ದಾಳಿಯಲ್ಲಿ ನಾಲ್ವರು ಪುರುಷ `ಮಾದಕ ವಸ್ತು ಭಯೋತ್ಪಾದಕರನ್ನು' ಹತ್ಯೆ ಮಾಡಿರುವುದಾಗಿ ಅಮೆರಿಕಾದ ಮಿಲಿಟರಿ ಹೇಳಿದೆ.
On Dec. 17, at the direction of @SecWar Pete Hegseth, Joint Task Force Southern Spear conducted a lethal kinetic strike on a vessel operated by a Designated Terrorist Organizations in international waters. Intelligence confirmed that the vessel was transiting along a known… pic.twitter.com/Yhu3LSOyea
— U.S. Southern Command (@Southcom) December 18, 2025
ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ನಿಯೋಜಿತ ಭಯೋತ್ಪಾದಕ ಗುಂಪು ನಿರ್ವಹಿಸುತ್ತಿದ್ದ ಹಡಗಿನ ಮೇಲೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ನಿರ್ದೇಶನದ ಮೇರೆಗೆ ಡಿಸೆಂಬರ್ 17ರಂದು ನಿಖರ ದಾಳಿ ನಡೆಸಲಾಗಿದ್ದು ನಾಲ್ವರು ಪುರುಷ ಮಾದಕ ವಸ್ತು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಅಮೆರಿಕಾದ ಮಿಲಿಟರಿ ಪಡೆಗಳಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಹೇಳಿಕೆ ತಿಳಿಸಿದೆ.
ಇದರೊಂದಿಗೆ ಮಾದಕ ವಸ್ತು ಕಳ್ಳಸಾಗಣೆಯ ಆರೋಪದಡಿ ಅಮೆರಿಕಾ ಕ್ಯಾರಿಬಿಯನ್ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಹಡಗುಗಳ ಮೇಲೆ ನಡೆಸುತ್ತಿರುವ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 99ಕ್ಕೇರಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗಳನ್ನು ಸಮರ್ಥಿಸಿಕೊಂಡಿದ್ದು ಅಮೆರಿಕಾಕ್ಕೆ ಮಾದಕ ವಸ್ತು ಕಳ್ಳಸಾಗಣೆಯನ್ನು ತಡೆಯಲು ಇದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿರುವ ಡೆಮಾಕ್ರಟಿಕ್ ಸಂಸದ ಗ್ರೆಗೋರಿ ಮೀಕ್ಸ್, ವೆನೆಝುವೆಲಾದ ತೈಲದ ಮೇಲೆ ಕಣ್ಣಿಟ್ಟು ಟ್ರಂಪ್ ಈ ವಲಯದಲ್ಲಿ ಆಕ್ರಮಣಕ್ಕೆ ನಿರ್ಧರಿಸಿದ್ದಾರೆ ಎಂದು ಟೀಕಿಸಿದ್ದಾರೆ.







