ಅಮೆರಿಕಾ ಸರಕಾರ ಭಾಗಶಃ ಸ್ಥಗಿತ

Photo Credit : AP \ PTI
ವಾಷಿಂಗ್ಟನ್: ಅಮೆರಿಕಾ ಸಂಸತ್ತು 2026ರ ಬಜೆಟನ್ನು ಗಡುವಿನೊಳಗೆ ಅನುಮೋದಿಸಲು ವಿಫಲಗೊಂಡ ಹಿನ್ನೆಲೆಯಲ್ಲಿ ಅಮೆರಿಕಾದ ಸರಕಾರ ಶನಿವಾರ ಭಾಗಶಃ ಸ್ಥಗಿತಗೊಂಡಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಂದಿನ ವಾರದ ಆರಂಭದಲ್ಲಿ ಸೆನೆಟ್ ಬೆಂಬಲಿತ ನಿಧಿಯ ಒಪ್ಪಂದವನ್ನು ಸದನ ಅನುಮೋದಿಸುವ ನಿರೀಕ್ಷೆ ಇರುವುದರಿಂದ ಸ್ಥಗಿತ ಪ್ರಕ್ರಿಯೆ ಸಂಕ್ಷಿಪ್ತವಾಗಿರಬಹುದು ಎಂದು ಸಂಸದರು ಸೂಚನೆ ನೀಡಿದ್ದಾರೆ.
ಮಿನಿಯಾಪೋಲಿಸ್ನಲ್ಲಿ ಫೆಡರಲ್ ವಲಸೆ ಅಧಿಕಾರಿಗಳ ಕೈಯಲ್ಲಿ ಇಬ್ಬರು ಸಾವನ್ನಪ್ಪಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಡೆಮಾಕ್ರಟಿಕ್ ಸದಸ್ಯರು ರಾಷ್ಟ್ರೀಯ ಭದ್ರತಾ ಇಲಾಖೆಗೆ ಬಜೆಟ್ನಲ್ಲಿ ಹೊಸ ಅನುದಾನ ಮೀಸಲಿಡುವ ಚರ್ಚೆಗೆ ಅಡ್ಡಿಪಡಿಸಿದ್ದರಿಂದ ಬಜೆಟ್ ಅನುಮೋದನೆ ಕುರಿತ ಚರ್ಚೆ ಮುರಿದು ಬಿದ್ದಿದೆ ಎಂದು ವರದಿಯಾಗಿದೆ. ಇದು 75%ದಷ್ಟು ಫೆಡರಲ್ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಲಿದೆ. ಮುಂದಿನ ವಾರದ ಆರಂಭದಲ್ಲಿ ಸದನ ಬಜೆಟ್ ಪ್ಯಾಕೇಜ್ಗೆ ಅನುಮೋದನೆ ನೀಡಿದರೆ ಕೆಲ ದಿನಗಳಲ್ಲೇ ಅನುದಾನವನ್ನು ಮರುಸ್ಥಾಪಿಸಬಹುದು ಎಂದು ವರದಿ ಹೇಳಿದೆ.





