ಬಜೆಟ್ಗೆ ಸಿಗದ ಅನುಮೋದನೆ : 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಸರಕಾರದ ಕಾರ್ಯ ಸ್ಥಗಿತ

Photo | Reuters
ವಾಷಿಂಗ್ಟನ್ : ಬಜೆಟ್ಗೆ ಅನುಮೋದನೆ ಸಿಗದ ಕಾರಣ ಸುಮಾರು ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಸರಕಾರದ ಕಾರ್ಯ ಸ್ಥಗಿತವಾಗಿರುವ ಬಗ್ಗೆ ವರದಿಯಾಗಿದೆ.
ತಾತ್ಕಾಲಿಕ ಹಣಕಾಸು ಮಸೂದೆ ಅಂಗೀಕರಿಸಲು ಸೆನೆಟ್ ವಿಫಲವಾದ ಕಾರಣ ಈ ಪರಿಸ್ಥಿತಿ ಉಂಟಾಗಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಷ್ಟು ಸರಕಾರಿ ನೌಕರರನ್ನು ಕೆಲಸದಿಂದ ಕೈಬಿಡುವ ಎಚ್ಚರಿಕೆ ನೀಡಿದ್ದಾರೆ.
ವಿಪಕ್ಷ ಡೆಮಾಕ್ರಟಿಕ್ ಸದಸ್ಯರು , ಟ್ರಂಪ್ ನೇತೃತ್ವದ ರಿಪಬ್ಲಿಕನ್ ಸರಕಾರದ ತಾತ್ಕಾಲಿಕ ಹಣಕಾಸು ಮಸೂದೆ ತಿರಸ್ಕರಿಸಿದ್ದರಿಂದ ಈ ಸ್ಥಿತಿ ಉಂಟಾಗಿದೆ. ಮಧ್ಯರಾತ್ರಿ ಸರಕಾರದ ಹಣಕಾಸು ಅವಧಿ ಮುಗಿದಿದೆ. ಮುಂದೇನು ಆಗಲಿದೆ ಎಂಬುದು ಸ್ಪಷ್ಟವಾಗಿಲ್ಲ.
ಈ ಬೆಳವಣಿಗೆಯಿಂದ ಲಕ್ಷಾಂತರ ಸರಕಾರಿ ನೌಕರರು ತಾತ್ಕಾಲಿಕವಾಗಿ ವೇತನವಿಲ್ಲದೆ ಇರುವ ಪರಿಸ್ಥಿತಿ ಎದುರಾಗಲಿದೆ. ಸಮಾಜ ಕಲ್ಯಾಣ ಯೋಜನೆಗಳಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ.
2018-2019ರಲ್ಲಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಬಜೆಟ್ಗೆ ಅನುಮೋದನೆ ಸಿಗದ ಕಾರಣ ಅಮೆರಿಕ ಸರಕಾರದ ಕಾರ್ಯ ಐದು ವಾರಗಳ ಕಾಲ ಸ್ಥಗಿತಗೊಂಡಿತ್ತು.





