ಗಾಝಾದಲ್ಲಿ ನೆರವು ಸಿಬ್ಬಂದಿ ಮೇಲಿನ ದಾಳಿಗೆ ಹಮಾಸ್ ದೂಷಿಸಿದ ಅಮೆರಿಕ

PC: x.com/WIONews
ವಾಷಿಂಗ್ಟನ್: ಗಾಝಾದಲ್ಲಿ ಆಹಾರ ವಿತರಣಾ ಸ್ಥಳದ ಬಳಿ ಅಮೆರಿಕದ ಇಬ್ಬರು ನೆರವು ವಿತರಣಾ ಕಾರ್ಯಕರ್ತರು ಗಾಯಗೊಳ್ಳಲು ಕಾರಣವಾದ ದಾಳಿಯನ್ನು ಹಮಾಸ್ ನಡೆಸಿದ್ದು ಇದು ಹಿಂಸಾಚಾರದ ಕೃತ್ಯವಾಗಿದೆ ಎಂದು ಅಮೆರಿಕ ದೂಷಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್(ಜಿಎಚ್ಎಫ್)ನ ಪರವಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆ ದಾಳಿ ನಡೆದಿದೆ. ಪ್ರಾಥಮಿಕ ಮಾಹಿತಿಯಂತೆ ಇಬ್ಬರು ಗುರುತಿಸಲಾಗದ ದುಷ್ಕರ್ಮಿಗಳು ಗ್ರೆನೇಡ್ ಎಸೆದಿದ್ದಾರೆ. ಈ ಹಿಂಸಾಚಾರಕ್ಕೆ ಹಮಾಸ್ ಸದಸ್ಯರು ಕಾರಣ ಎಂಬುದು ಸ್ಪಷ್ಟವಾಗಿದೆ. ಗಾಝಾ ನಿವಾಸಿಗಳಿಗೆ ಆಹಾರ ಒದಗಿಸುವ ಕಾರ್ಯದ ವಿರುದ್ಧದ ಹಿಂಸಾಕೃತ್ಯವು ಹಮಾಸ್ನ ದುಷ್ಟತನವನ್ನು ತೋರಿಸುತ್ತದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Story