ಕದನ ವಿರಾಮ ವಿಸ್ತರಣೆ ಕುರಿತು ಅಮೆರಿಕ ಔಪಚಾರಿಕ ಒಪ್ಪಿಗೆ ನೀಡಿಲ್ಲ: ವರದಿ

PC: gemini AI
ವಾಷಿಂಗ್ಟನ್, ಎ.15: ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸುವ ಬಗ್ಗೆ ಅಮೆರಿಕ ಇನ್ನೂ ಯಾವುದೇ ಔಪಚಾರಿಕ ಒಪ್ಪಿಗೆ ನೀಡಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಿಟರ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದಂತೆ, ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಮಾತನಾಡಿದ ಆ ಅಧಿಕಾರಿ, ಕದನ ವಿರಾಮ ವಿಸ್ತರಣೆ ಕುರಿತ ಅಂತಿಮ ಒಪ್ಪಂದಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಈ ನಡುವೆ, ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ಮಾತುಕತೆಗಳು ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಇಬ್ಬರೂ ದೇಶಗಳ ನಡುವೆ ಮಾತುಕತೆ ಪ್ರಾರಂಭಿಸಲು ಆಗ್ರಹಿಸಿದ್ದಾರೆ.
Next Story




