ಒಮಾನ್ ಕೊಲ್ಲಿಯಲ್ಲಿ ಇರಾನ್ ಧ್ವಜವಿದ್ದ ತೈಲ ಟ್ಯಾಂಕರ್ ತಡೆದ ಅಮೆರಿಕ

ಸಾಂದರ್ಭಿಕ ಚಿತ್ರ | Photo Credit : PTI
ವಾಶಿಂಗ್ಟನ್, ಮೇ 21: ಒಮಾನ್ ಕೊಲ್ಲಿಯಲ್ಲಿ ಅಮೆರಿಕದ ನಿರ್ಬಂಧವನ್ನು ಉಲ್ಲಂಘಿಸಲು ಪ್ರಯತ್ನಿಸಿದ ಇರಾನ್ನ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಮೇಲೆ ಹತ್ತಿ ಪರಿಶೀಲನೆ ನಡೆಸಿರುವುದಾಗಿ ಅಮೆರಿಕದ ಮಿಲಿಟರಿ ಹೇಳಿದೆ.
ಇರಾನ್ನ ಧ್ವಜ ಹೊಂದಿದ್ದ ಎಂ/ಟಿ ಸೆಲೆಸ್ಟಿಯಲ್ ಸೀ ಎಂಬ ಹಡಗು ಇರಾನ್ ಬಂದರಿನತ್ತ ಸಾಗುತ್ತಿರುವ ಶಂಕೆಯಲ್ಲಿ ಅದನ್ನು ತಡೆದು ಪರಿಶೀಲನೆ ನಡೆಸಿ ವಾಪಾಸು ಕಳುಹಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಎಪ್ರಿಲ್ ಮಧ್ಯದಲ್ಲಿ ಇರಾನ್ ಹಡಗು ಸಾಗಣೆಗೆ ದಿಗ್ಬಂಧನ ವಿಧಿಸಿದ ನಂತರ ಅಮೆರಿಕದ ಮಿಲಿಟರಿ ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ ಐದನೇ ಹಡಗು ಇದಾಗಿದೆ.
Next Story




