ಇರಾನ್ ಜೊತೆ ಇಂಧನ ವ್ಯಾಪಾರ: 8 ಭಾರತೀಯರಿಗೆ ಅಮೆರಿಕ ನಿರ್ಬಂಧ

ಸಾಂದರ್ಭಿಕ ಚಿತ್ರ | PTI
ಟೆಹ್ರಾನ್, ಅ.11: ಇರಾನಿನ ಇಂಧನ ವ್ಯಾಪಾರಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಅಮೆರಿಕಾವು ಭಾರತದ 8 ಪ್ರಜೆಗಳು ಹಾಗೂ ಹಲವು ಸಂಸ್ಥೆಗಳ ಮೇಲೆ ನಿರ್ಬಂಧ ವಿಧಿಸಿರುವುದಾಗಿ ಅಮೆರಿಕಾದ ವಿದೇಶಾಂಗ ಇಲಾಖೆ ಘೋಷಿಸಿದೆ.
ನೀತಿ ಉನ್ಮೇಶ್ ಭಟ್ ಹಾಗೂ ಅವರ ಸಂಸ್ಥೆ ಇಂಡಿಸೋಲ್ ಮಾರ್ಕೆಟಿಂಗ್ ಪ್ರೈ.ಲಿ; ಪಿಯೂಷ್ ಮಗನ್ಲಾಲ್ ಜವಿಯಾ ಮತ್ತು ಅವರ ಸಂಸ್ಥೆ ಚೆಮೊವಿಕ್ ಪ್ರೈ.ಲಿ; ಕಮ್ಲಾ ಕನ್ಯಾಲಾಲ್ ಕಸಟ್, ಕುಣಾಲ್ ಕನ್ಯಾಲಾಲ್ ಕಸಟ್ ಮತ್ತು ಪೂನಂ ಕುಣಾಲ್ ಕಸಟ್ ಹಾಗೂ ಅವರ ಸಂಸ್ಥೆ ಹರೇಶ್ ಪೆಟ್ರೊಕೆಮ್ ಪ್ರೈ.ಲಿ; ವರುಣ್ ಪುಲಾ ಮತ್ತು ಮಾರ್ಷಲ್ ದ್ವೀಪ ಮೂಲದ ಅವರ ಸಂಸ್ಥೆ ಬೆರ್ಥಾ ಶಿಪ್ಪಿಂಗ್, ಇಯಾಪ್ಪನ್ ರಾಜಾ ಮತ್ತು ಅವರ ಸಂಸ್ಥೆ ಎವೀ ಲೈಮ್ಸ್, ಸೋನಿಯಾ ಶ್ರೇಷ್ಠ ಮತ್ತು ಅವರ ಸಂಸ್ಥೆ ವೆಗಾ ಸ್ಟಾರ್ ಶಿಪ್ ಮ್ಯಾನೇಜ್ಮೆಂಟ್ ಪ್ರೈ.ಲಿ; ಹಾಗೂ ಭಾರತದ ಸಂಸ್ಥೆಗಳಾದ ಬಿ.ಕೆ. ಸೇಲ್ಸ್ ಕಾರ್ಪೊರೇಷನ್, ಸಿ.ಜೆ. ಶಾ ಆ್ಯಂಡ್ ಕಂಪೆನಿ, ಮೋದಿ ಕೆಮಿಕಲ್ಸ್, ಪಾರಿಕೆಮ್ ರಿಸೋರ್ಸಸ್ ಎಲ್ಎಲ್ಪಿ ಮತ್ತು ಶಿವ್ ಟೆಕ್ಸ್ಕೆಮ್ ಲಿ. ಸಂಸ್ಥೆಗಳು ಈ ಪಟ್ಟಿಯಲ್ಲಿವೆ ಎಂದು ಹೇಳಿಕೆ ತಿಳಿಸಿದೆ.





