ಪಾಕ್ನಲ್ಲಿ ಅಮೆರಿಕ-ಇರಾನ್ ಮಾತುಕತೆಗೆ ರಂಗ ಸಜ್ಜು; ಶೆಹಬಾಝ್ ಷರೀಫ್ ಆಹ್ವಾನಕ್ಕೆ ಒಪ್ಪಿದ ಟ್ರಂಪ್

ಶೆಹಬಾಝ್ ಷರೀಫ್ , ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅವರ ಆಹ್ವಾನದ ಸ್ಕ್ರೀನ್ಶಾಟ್ ಅನ್ನು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ಇರಾನ್ ಜೊತೆ ಮಾತುಕತೆಗಳು ಪಾಕಿಸ್ತಾನದಲ್ಲಿ ನಡೆಯಬಹುದು ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ.
‘ಅಮೆರಿಕ ಮತ್ತು ಇರಾನ್ ಒಪ್ಪಿಗೆಗೆ ಒಳಪಟ್ಟು ಪ್ರಸಕ್ತ ಸಂಘರ್ಷವನ್ನು ನಿಲ್ಲಿಸಲು ಅರ್ಥಪೂರ್ಣ ಮತ್ತು ನಿರ್ಣಾಯಕ ಮಾತುಕತೆಗಳಿಗೆ ಆತಿಥ್ಯ ಒದಗಿಸಲು ಪಾಕಿಸ್ತಾನವು ಸಿದ್ಧವಾಗಿದೆ ಮತ್ತು ಇದು ನಮಗೆ ಗೌರವವೂ ಆಗಿರಲಿದೆ’ ಎಂದು ಷರೀಫ್ ಮಂಗಳವಾರ ಸಂಜೆ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಪೋಸ್ಟ್ನ ಸ್ಕ್ರೀನ್ಶಾಟ್ ಪಡೆದುಕೊಂಡ ಟ್ರಂಪ್ ಒಂದೇ ಗಂಟೆಯೊಳಗೆ ಅದನ್ನು ತನ್ನ ಟ್ರುಥ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Next Story







