US Midterm Election | ಇರಾನ್ ಯುದ್ಧದ ಭಾರಿ ವೆಚ್ಚವೇ ರಿಪಬ್ಲಿಕನ್ ಸೋಲಿಗೆ ಕಾರಣ: ಟ್ರಂಪ್
ಯುದ್ಧ ಅನಿವಾರ್ಯವಾಗಿತ್ತು, ಮುಂದುವರಿಸುತ್ತೇವೆ ಎಂದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ | Photo Credit : AP
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ನಡೆಸಿದ ಯುದ್ಧಕ್ಕಾಗಿ ತೆತ್ತ ಭಾರಿ ಬೆಲೆಯೇ ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ವೈಟ್ಹೌಸ್ ನವೀಕರಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ವಿರುದ್ಧ ಅಮೆರಿಕ ಕೈಗೊಂಡಿರುವ ಕ್ರಮ ಅನಿವಾರ್ಯವಾಗಿತ್ತು. ಈ ಕ್ರಮವನ್ನು ಮುಂದೆಯೂ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಯುದ್ಧವೇ ಕಾರಣವಲ್ಲ. ಬದಲಾಗಿ, ಯುದ್ಧಕ್ಕಾಗಿ ಅಮೆರಿಕ ತೆತ್ತ 'ಭಾರಿ ಬೆಲೆ'ಯೇ ಸೋಲಿಗೆ ಕಾರಣ ಎಂದು ಟ್ರಂಪ್ ಹೇಳಿದರು.
Next Story




