US Midterm Election | ‘ಒಳ್ಳೆಯವರು ಗೆದ್ದಿದ್ದಾರೆ’; ಹಣಬಲದ ಸವಾಲು ಮೆಟ್ಟಿ ಗೆದ್ದ ಅಲ್-ಸಯೀದ್ ಗೆ ಝೊಹ್ರಾನ್ ಮಮ್ದಾನಿ ಮೆಚ್ಚುಗೆ

ಝೊಹ್ರಾನ್ ಮಮ್ದಾನಿ | ಅಬ್ದುಲ್ ಅಲ್-ಸಯೀದ್
(Photo: screengrab/x.com/JPDigitalPak/clashreport)
ನ್ಯೂಯಾರ್ಕ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಮಿಶಿಗನ್ ನಿಂದ ಸೆನೆಟರ್ ಆಗಿ ಆಯ್ಕೆಯಾದ ಅಬ್ದುಲ್ ಅಲ್-ಸಯೀದ್ ಅವರ ಗೆಲುವಿಗೆ ನ್ಯೂಯಾರ್ಕ್ ಸಿಟಿ ಮೇಯರ್ ಝೊಹ್ರಾನ್ ಮಮ್ದಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಅಲ್-ಸಯೀದ್ ಅವರ ವಿರುದ್ಧ ಚುನಾವಣಾ ಪ್ರಚಾರದಲ್ಲಿ ಭಾರಿ ಪ್ರಮಾಣದ ಹಣ ಖರ್ಚು ಮಾಡಲಾಗಿತ್ತು. ಇಂತಹ ಪ್ರತಿಕೂಲ ಪರಿಸ್ಥಿತಿ ಮತ್ತು ಹಲವು ಸವಾಲುಗಳ ನಡುವೆಯೂ ಅವರು ಗೆಲುವು ಸಾಧಿಸಿರುವುದನ್ನು ಮಮ್ದಾನಿ ಶ್ಲಾಘಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್-ಸಯೀದ್ ಅವರ ಆಯ್ಕೆಯು ಅನೇಕರ ಪಾಲಿಗೆ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
"ಚುನಾವಣಾ ಪ್ರಚಾರದ ಅವಧಿಯಲ್ಲಿ ಅವರು ಎದುರಿಸಿದ ಸವಾಲುಗಳ ನಡುವೆಯೂ ಗೆಲುವು ಸಾಧಿಸಿರುವುದನ್ನು ನೋಡುವುದು ಅತ್ಯಂತ ರೋಮಾಂಚನಕಾರಿಯಾಗಿದೆ" ಎಂದು ಮಮ್ದಾನಿ ಹೇಳಿದರು.
"ನಿನ್ನೆ ರಾತ್ರಿ ಅವರು ಹೇಳಿದಂತೆ, ಒಳ್ಳೆಯವರು ಗೆದ್ದಿದ್ದಾರೆ" ಎಂದು ಅವರು ನುಡಿದರು.




