ಅಮೆರಿಕ ಇತರ ಸ್ವತಂತ್ರ ರಾಷ್ಟ್ರಗಳಿಗೆ ಷರತ್ತುಗಳನ್ನು ಆಜ್ಞಾಪಿಸುವ ಸ್ಥಿತಿಯಲ್ಲಿಲ್ಲ: ಇರಾನ್

Photo credit: AI
ಟೆಹರಾನ್, ಎ.28: ಇತರ ದೇಶಗಳು ಏನು ಮಾಡಬೇಕು ಎಂಬುದನ್ನು ಆಜ್ಞಾಪಿಸುವ ಸ್ಥಿತಿಯಲ್ಲಿ ಇನ್ನು ಮುಂದೆ ಅಮೆರಿಕ ಇರುವುದಿಲ್ಲ ಎಂದು ಇರಾನ್ ರಕ್ಷಣಾ ಸಚಿವಾಲಯದ ವಕ್ತಾರ ರೆಝಾ ತಲೈ-ನಿಕ್ ಮಂಗಳವಾರ ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ನೊಂದಿಗಿನ ಯುದ್ಧದ ಆರಂಭದಿಂದಲೂ ಇರಾನ್ ಹಾರ್ಮುಝ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚಿದೆ. ಮಾತುಕತೆಯ ಸಂದರ್ಭ ತನ್ನ ಕಾನೂನುಬಾಹಿರ ಮತ್ತು ತರ್ಕಬಾಹಿರ ಷರತ್ತುಗಳನ್ನು ತ್ಯಜಿಸಬೇಕು ಎಂಬುದನ್ನು ಅಮೆರಿಕ ಒಪ್ಪಿಕೊಳ್ಳಬೇಕು. ಮಾತುಕತೆಯ ದಿಕ್ಕನ್ನು ತನ್ನ ಇಷ್ಟ ಪ್ರಕಾರ ನಿರ್ಧರಿಸುವ ಸ್ಥಿತಿಯಲ್ಲಿ ತಾನಿಲ್ಲ ಎಂಬುದನ್ನು ಅಮೆರಿಕ ಒಪ್ಪಿಕೊಳ್ಳಬೇಕು ಎಂದು ರೆಝಾ ಆಗ್ರಹಿಸಿದ್ದಾರೆ. ಇರಾನ್ ತನ್ನ ರಕ್ಷಣಾತ್ಮಕ ಮಿಲಿಟರಿ ಸಾಮರ್ಥ್ಯಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಇರಾನ್ನ ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.
Next Story




