ರಶ್ಯದಿಂದ ತೈಲ ಖರೀದಿಯನ್ನು ಭಾರತ ಬಹುತೇಕ ನಿಲ್ಲಿಸಿಬಿಟ್ಟಿದೆ: ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ,ನ.7: ಪ್ರಧಾನಿ ನರೇಂದ್ರ ಅವರೊಬ್ಬ ‘ಮಹಾನ್ ವ್ಯಕಿ’ಯೆಂದು ಟ್ರಂಪ್ ಮತ್ತೊಮ್ಮೆ ಬಣ್ಣಿಸಿದ್ದಾರೆ ಹಾಗೂ ಭಾರತವು ಬಹುತೇಕವಾಗಿ ರಶ್ಯನ್ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ. ಮೋದಿ ಅವರ ಆಹ್ವಾನದ ಮೇರೆಗೆ ತಾನು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿ ಅವರು ಹೇಳಿದ್ದಾರೆ. ಭಾರತ-ಅಮೆರಿಕ ನಡುವೆ ವ್ಯಾಪಾರ ಮಾತುಕತೆ ಮುಂದುವರಿದಿರುವ ನಡುವೆಯೇ ಟ್ರಂಪ್ ಅವರು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
ಉಭಯದೇಶಗಳ ನಡುವಿನ ವ್ಯಾಪಾರ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ತನಗಿಲ್ಲವೆಂದು ಡೊನಾಲ್ಡ್ ಈ ಹಿಂದೆ ಹೇಳಿಕೊಂಡಿದ್ದರು.
ರಶ್ಯದಿಂದ ತೈಲ ಖರೀದಿಸುವುದಿಲ್ಲವೆಂದು ಮೋದಿ ತನಗೆ ಭರವಸೆ ನೀಡಿದ್ದಾರೆಂದು ಹೇಳುವ ಮೂಲಕ ಟ್ರಂಪ್ ಅವರು ಕಳೆದ ತಿಂಗಳು ಹೊಸ ವಿವಾದವನ್ನು ಹುಟ್ಟುಹಾಕಿದ್ದರು. ಭಾರತವು ತೈಲವನ್ನು ಖರೀದಿಸುವ ಮೂಲ ರಶ್ಯಕ್ಕೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಆರ್ಥಿಕವಾಗಿ ನೆರವು ನೀಡುತ್ತಿದೆಯೆಂದು ಟ್ರಂಪ್ ಆಪಾದಿಸಿದ್ದರು. ರಶ್ಯದಿಂದ ತೈಲ ಖರೀದಿಯನ್ನು ಭಾರತವು ಈವರೆಗೆ ಬಹಿರಂಗವಾಗಿ ಸಮರ್ಥಿಸುತ್ತಾ ಬಂದಿದೆ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳಿಂದ ಪ್ರೇರಿತವಾಗಿ ಗ್ರಾಹಕರಿಗೆ ಯೋಗ್ಯ ದರದಲ್ಲಿ ಆಮದು ಇಂಧನಗಳನ್ನು ಒದಗಿಸುವುದು ಅಗತ್ಯವೆಂದು ಭಾರತದ ವಿದೇಶಾಂಗ ಸಚಿವಾಲಯವು ಪ್ರತಿಪಾದಿಸುತ್ತಾ ಬಂದಿದೆ.







