ಇರಾನ್ ಬೇಷರತ್ತಾಗಿ ಶರಣಾಗತವಾಗಬೇಕು : ಡೊನಾಲ್ಡ್ ಟ್ರಂಪ್
ಅಯಾತೊಲ್ಲಾ ಅಲಿ ಖಾಮಿನೈ ಎಲ್ಲಿ ಅಡಗಿದ್ದಾರೆಂದು ನಮಗೆ ತಿಳಿದಿದೆ : ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್ : ಅಯಾತೊಲ್ಲಾ ಅಲಿ ಖಾಮಿನೈ ಎಲ್ಲಿ ಅಡಗಿದ್ದಾರೆಂದು ನಮಗೆ ನಿಖರವಾಗಿ ತಿಳಿದಿದೆ. ಇರಾನ್ ಬೇಷರತ್ತಾಗಿ ಶರಣಾಗತರಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎಕ್ಸ್ ಖಾತೆ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವವರು ಎಲ್ಲಿ ಅಡಗಿದ್ದಾರೆಂದು ನಮಗೆ ನಿಖರವಾಗಿ ತಿಳಿದಿದೆ. ಅವರನ್ನು ಗುರಿಯಾಗಿಸುವುದು ಸುಲಭ, ಆದರೆ ಅಲ್ಲಿ ಸುರಕ್ಷಿತರಾಗಿದ್ದಾರೆ. ನಾವು ಅವರನ್ನು ಕೊಲ್ಲಲು ಹೋಗುವುದಿಲ್ಲ. ಆದರೆ ನಾಗರಿಕರು ಅಥವಾ ಅಮೆರಿಕನ್ ಸೈನಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ತಾಳ್ಮೆ ಕ್ಷೀಣಿಸುತ್ತಿದೆ ಎಂದು ಹೇಳಿದರು.
ಮತ್ತೊಂದು ಪೋಸ್ಟ್‌ನಲ್ಲಿ ಟ್ರಂಪ್ ದೊಡ್ಡಕ್ಷರಗಳಲ್ಲಿ ʼಬೇಷರತ್ತಾದ ಶರಣಾಗತಿʼ ಎಂದು ಬರೆದಿದ್ದಾರೆ.
Next Story





