‘ನೆತನ್ಯಾಹು ಈಗ ಉತ್ತಮ ಸ್ಥಿತಿಯಲ್ಲಿದ್ದಾರೆ’: ಟ್ರಂಪ್
‘ನನ್ನ ಬೆಂಬಲ ಬೀಬಿಗೆ ದೊಡ್ಡ ವ್ಯತ್ಯಾಸ ತಂದಿದೆ’ ಎಂದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ , ಬೆಂಜಮಿನ್ ನೆತನ್ಯಾಹು | Photo Credit : PTI
ವಾಷಿಂಗ್ಟನ್: ‘ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗ ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರಿಗೆ ನನ್ನ ಬೆಂಬಲ ದೊಡ್ಡ ವ್ಯತ್ಯಾಸವನ್ನುಂಟುಮಾಡಿದೆ ಎಂದು ಕೇಳಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾಗಶಃ ಫಲಿತಾಂಶಗಳು ಪ್ರಕಟವಾದ ಬಳಿಕ ‘ಆಕ್ಸಿಯಾಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್, ‘ನನ್ನ ಅನುಮೋದನೆಯು ಬೀಬಿಗೆ ದೊಡ್ಡ ವ್ಯತ್ಯಾಸವನ್ನುಂಟುಮಾಡಿದೆ ಎಂದು ಕೇಳಿದ್ದೇನೆ’ ಎಂದು ತಿಳಿಸಿದ್ದಾರೆ.
US President Donald Trump says Netanyahu is in “pretty good shape now” after partial results were released.
Trump added that he had not yet thought about being involved in an effort to form a Netanyahu-led Israeli government.
🔴 LIVE updates: https://t.co/6gTzKogVEg https://t.co/Tn792FnUzB
— Al Jazeera English (@AJEnglish) October 28, 2026
‘ಬೀಬಿ’ ಎಂಬುದು ನೆತನ್ಯಾಹು ಅವರ ಅಡ್ಡಹೆಸರು.
ನೆತನ್ಯಾಹು ನೇತೃತ್ವದಲ್ಲಿ ಇಸ್ರೇಲ್ನಲ್ಲಿ ಸರಕಾರ ರಚಿಸುವ ಪ್ರಯತ್ನದಲ್ಲಿ ತಾನು ಭಾಗಿಯಾಗುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ‘ನೋಡೋಣ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.




