ಸ್ವಯಂ-ಗಡಿಪಾರು ಜಾಹೀರಾತನ್ನು ತೆಗೆದುಹಾಕಿದ ಟ್ರಂಪ್ ಆಡಳಿತ

Photo Credit ; PTI , Homeland Security \ X
ವಾಷಿಂಗ್ಟನ್, ಸೆ.11: ಅಮೆರಿಕದ ಆಂತರಿಕ ಭದ್ರತಾ ಇಲಾಖೆಯು ಭಾರತೀಯ ಅಮೆರಿಕನ್ ಟ್ರಕ್ ಚಾಲಕರನ್ನು ಗುರಿಯಾಗಿಸಿಕೊಂಡಿದ್ದ ‘ಮಿಸ್ಟರ್ ಸಿಂಗ್’ ಎಂಬ ಹೆಸರನ್ನು ಹೊಂದಿದ್ದ ವಲಸೆ ಜಾರಿ ಜಾಹೀರಾತನ್ನು ಶುಕ್ರವಾರ ತೆಗೆದುಹಾಕಿದೆ.
‘ಅಮೆರಿಕನ್ನರಿಗೆ ಮಾತ್ರ ಅಮೆರಿಕ. ನಮ್ಮ ರಸ್ತೆಗಳಿಂದ ದೂರವಿರಿ; ನಿಮಗೆ ಚಾಲನೆ ಮಾಡುವುದು ಹೇಗೆ ಎಂದು ತಿಳಿದಿಲ್ಲ, ಮಿಸ್ಟರ್ ಸಿಂಗ್’ ಎಂಬ ಸಂದೇಶವನ್ನು ಹೊಂದಿದ್ದ ಈ ಪ್ರಚಾರ ಅಭಿಯಾನವು ಜನಾಂಗೀಯ ತಾರತಮ್ಯದ ಆರೋಪಗಳನ್ನು ಎದುರಿಸಿದ್ದಲ್ಲದೆ, ಸಿಖ್ ಮತ್ತು ಇಂಡಿಯನ್-ಅಮೆರಿಕನ್ ಗುಂಪುಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು.
ಹಕ್ಕುಗಳ ಹೋರಾಟದ ಗುಂಪುಗಳು ಮತ್ತು ಡೆಮಾಕ್ರಟಿಕ್ ನಾಯಕರಿಂದ ಬಂದ ವ್ಯಾಪಕ ಟೀಕೆಗಳ ನಂತರ ಈ ಪೋಸ್ಟರ್ ಅನ್ನು ತೆಗೆದುಹಾಕಲಾಗಿದೆ.
Next Story




