ಇರಾನ್ ಮೇಲಿನ ತೈಲ ನಿರ್ಬಂಧಗಳ ವಿನಾಯಿತಿ ರದ್ದುಗೊಳಿಸಿದ ಅಮೆರಿಕ

Photo Credit : AP
ವಾಶಿಂಗ್ಟನ್, ಜು.8: ಹಾರ್ಮುಝ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆದ ನಂತರ, ಇರಾನಿನ ತೈಲ ಮಾರಾಟಕ್ಕೆ ಅಧಿಕಾರ ನೀಡಿದ್ದ ಸಾಮಾನ್ಯ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಅಮೆರಿಕ ಹೇಳಿದೆ.
ಜೂನ್ ತಿಂಗಳಿನಲ್ಲಿ ಪ್ರಕಟಿಸಲಾಗಿದ್ದ ಪರವಾನಗಿಯನ್ನು ರದ್ದುಗೊಳಿಸಿದ್ದು ಇದು ಜುಲೈ 7ರಿಂದಲೇ ಜಾರಿಗೆ ಬಂದಿದೆ ಎಂದು ಅಮೆರಿಕ ಹಣಕಾಸು ಇಲಾಖೆ ಹೇಳಿದೆ. ಈ ಪರವಾನಗಿಯು ಇರಾನ್ಗೆ ಆಗಸ್ಟ್ 21ರವರೆಗೆ ಕಚ್ಚಾ ತೈಲ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಉತ್ಪಾದಿಸಲು, ಮಾರಾಟ ಮಾಡಲು ಮತ್ತು ಸರಬರಾಜು ಮಾಡಲು ಅವಕಾಶ ನೀಡಿತ್ತು.
ಜಲಸಂಧಿಯಲ್ಲಿ ಇರಾನ್ನ ಕ್ರಮಗಳನ್ನು ಯಾವುದೇ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲದ್ದಾಗಿದ್ದು, ಇದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story




