ಪೆಲೆಸ್ತೀನಿಯನ್ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಅಮೆರಿಕ ನಿರ್ಬಂಧ

PC : aljazeera.com
ವಾಷಿಂಗ್ಟನ್, ಜು.31: ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ದ ಅಧಿಕಾರಿಗಳು ಹಾಗೂ ಫೆಲೆಸ್ತೀನ್ ಲಿಬರೇಷನ್ ಆರ್ಗನೈಜೇಷನ್(ಪಿಎಲ್ಒ) ಸದಸ್ಯರ ಮೇಲೆ ಅಮೆರಿಕ ಗುರುವಾರ ನಿರ್ಬಂಧ ಜಾರಿಗೊಳಿಸಿದ್ದು ಈ ಎರಡೂ ಗುಂಪುಗಳು ಶಾಂತಿ ಪ್ರಯತ್ನವನ್ನು ದುರ್ಬಲಗೊಳಿಸುತ್ತಿವೆ ಎಂದು ಹೇಳಿದೆ.
ನಿರ್ಬಂಧಕ್ಕೆ ಗುರಿಯಾದವರಿಗೆ ಅಮೆರಿಕಾಕ್ಕೆ ಪ್ರಯಾಣಿಸಲು ವೀಸಾ ದೊರೆಯುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. `ಪಿಎಲ್ಒ ಮತ್ತು ಪಿಎ ತಮ್ಮ ಬದ್ಧತೆಗಳನ್ನು ಅನುಸರಿಸದ ಕಾರಣ ಮತ್ತು ಶಾಂತಿಯ ಸಾಧ್ಯತೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿವೆ. ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಮೂಲಕ ಇಸ್ರೇಲ್ ನೊಂದಿಗಿನ ತಮ್ಮ ಬಿಕ್ಕಟ್ಟನ್ನು ಅಂತರಾಷ್ಟ್ರೀಕರಣಗೊಳಿಸುವ ಕ್ರಮಗಳನ್ನು ಕೈಗೊಂಡಿದೆ. ಎರಡೂ ಗುಂಪುಗಳು ಭಯೋತ್ಪಾದನೆಗೆ ಬೆಂಬಲವನ್ನು ಮುಂದುವರಿಸಿದೆ' ಎಂದು ಇಲಾಖೆ ಪ್ರತಿಪಾದಿಸಿದೆ.
Next Story





