ಸರ್ಕಾರದ ಸ್ಥಗಿತ ಕೊನೆಗೊಳಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ

Photo credit: www.pbs.org
ವಾಷಿಂಗ್ಟನ್, ನ.11: ಅಮೆರಿಕಾದ ಇತಿಹಾಸದಲ್ಲೇ ಅತೀ ದೀರ್ಘಾವಧಿಯ ಸರಕಾರದ ಸ್ಥಗಿತವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಅಮೆರಿಕಾದ ಸೆನೆಟ್ ಸೋಮವಾರ ಅಂಗೀಕಾರ ನೀಡಿದೆ.
ಸೆನೆಟ್ನಲ್ಲಿ 60-40 ಮತಗಳಿಂದ ಮಸೂದೆ ಅಂಗೀಕರಿಸಲ್ಪಟ್ಟಿದ್ದು ಮುಂದಿನ ಹಂತದಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಹೊಂದಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಕಳುಹಿಸಲಾಗುವುದು. ಇಲ್ಲಿ ಬುಧವಾರವೇ ಅಂಗೀಕಾರ ಪಡೆದು ಅಧ್ಯಕ್ಷರ ಸಹಿಗಾಗಿ ರವಾನಿಸುವ ವಿಶ್ವಾಸವಿದೆ ಎಂದು ರಿಪಬ್ಲಿಕನ್ ಮೂಲಗಳು ಹೇಳಿವೆ.
Next Story





