ಸೌದಿ ಅರೇಬಿಯಾಗೆ ಪ್ರಯಾಣಿಸದಂತೆ ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : magnific.com
ವಾಶಿಂಗ್ಟನ್: ಅಮೆರಿಕ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ಇರಾನ್ ಬೆಂಬಲಿತ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿರುವ ಅಮೆರಿಕ, ತನ್ನ ಪ್ರಜೆಗಳಿಗೆ ಸೌದಿ ಅರೇಬಿಯಾ ಪ್ರವಾಸವನ್ನು ಮರುಪರಿಶೀಲಿಸುವಂತೆ ವಿನಂತಿಸಿದೆ. ಅಲ್ಲದೆ ಪ್ರಯಾಣದ ಎಚ್ಚರಿಕೆಯ ಮಟ್ಟವನ್ನು `ಲೆವೆಲ್ 3'ಗೆ ಹೆಚ್ಚಿಸಿದೆ.
ಹೌದಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಈ ನವೀಕರಿಸಿದ ಎಚ್ಚರಿಕೆಯನ್ನು ನೀಡಿದೆ. ಸೌದಿ ಅರೇಬಿಯಾದ ಕೆಲವು ಭಾಗಗಳು ಹೆಚ್ಚಿನ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿವೆ ಎಂದೂ ಇಲಾಖೆ ತಿಳಿಸಿದೆ.
ಭಯೋತ್ಪಾದನೆಯ ಬೆದರಿಕೆಯಿಂದಾಗಿ ಯಮನ್ ಗಡಿಯಲ್ಲಿರುವ ಸೌದಿ ಅರೇಬಿಯಾದ ಪ್ರದೇಶಗಳಿಗೆ `ಲೆವೆಲ್ 4 (ಪ್ರಯಾಣಿಸಬೇಡಿ) ಎಂಬ ಎಚ್ಚರಿಕೆಯನ್ನೂ ಅಮೆರಿಕ ನೀಡಿದೆ.
Next Story




