ವೆನೆಝುವೆಲಾ ದಾಳಿ ಬಳಿಕ ಮೆಕ್ಸಿಕೊ, ಕ್ಯೂಬಾ, ಕಾಂಬೋಡಿಯಾಗೆ ಅಮೆರಿಕ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್: ವೆನೆಝುವೆಲಾ ಮೇಲೆ ಅಮೆರಿಕ ಪಡೆಗಳು ದೊಡ್ಡ ಪ್ರಮಾಣದ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ಬೆನ್ನಲ್ಲೇ ಮೆಕ್ಸಿಕೋ, ಕ್ಯೂಬಾ ಹಾಗೂ ಕಾಂಬೋಡಿಯಾ ಕೂಡಾ ಇಂಥದ್ದೇ ಕ್ರಮಗಳನ್ನು ಎದುರಿಸಬೇಕಾಗಬಹುದು ಎಂದು ಅಲ್ಲಿನ ಸರ್ಕಾರಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಮಾದಕ-ಉಗ್ರಗಾಮಿ ಚಟುವಟಿಕೆಗಳ ಅನುಮಾನ ಮತ್ತು ಡ್ರಗ್ ಪ್ರಭಾವದ ಶಂಕೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ವೆನೆಝುವೆಲಾ ಮೇಲೆ ದಾಳಿ ನಡೆಸಿದ್ದರು.
ವೆನೆಝುವೆಲಾ ಮೇಲಿನ ದಾಳಿಯನ್ನು ಕ್ಯೂಬಾ ಹೇಗೆ ವಿಶ್ಲೇಷಿಸಬೇಕಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ "ನನ್ನ ಪ್ರಕಾರ ಕ್ಯೂಬಾದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕಾಗುತ್ತದೆ; ಏಕೆಂದರೆ ಕ್ಯೂಬಾ ಸರ್ಕಾರ ಸದ್ಯಕ್ಕೆ ವಿಫಲವಾಗಿದೆ" ಎಂದು ಫೋಕ್ಸ್ ನ್ಯೂಸ್ ಜತೆಗೆ ಮಾತನಾಡುವ ವೇಳೆ ಟ್ರಂಪ್ ಹೇಳಿದರು.
ಕ್ಯೂಬಾ ಜನತೆಗೆ ನೆರವು ನೀಡಲು ತಾವು ಬಯಸಿರುವುದಾಗಿಯೂ MAGA (Make America Great Again) ಮುಖ್ಯಸ್ಥರು ಹೇಳಿದರು. ಕ್ಯೂಬಾದಿಂದ ಬಲವಂತವಾಗಿ ಹೊರಗಿರುವ ಮತ್ತು ಕ್ಯೂಬಾದಲ್ಲಿ ವಾಸಿಸುವ ಜನತೆಗೂ ನಾವು ನೆರವಾಗಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಾಂಬೋಡಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೊ ಅವರ ಕಾರ್ಯವೈಖರಿಯನ್ನೂ ಟೀಕಿಸಿದ ಟ್ರಂಪ್, ಈ ಲ್ಯಾಟಿನ್ ಅಮೆರಿಕನ್ ದೇಶ ಕನಿಷ್ಠ ಮೂರು ಕೊಕೇನ್ ಫ್ಯಾಕ್ಟರಿಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಅವರು ಕೊಕೇನ್ ಉತ್ಪಾದಿಸಿ ಅಮೆರಿಕಕ್ಕೆ ಕಳುಹಿಸುತ್ತಾರೆ. ಅದಕ್ಕೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೆಟ್ರೊ ಅವರು ಮಡುರೊ ಅವರ ಮಿತ್ರ. ಆದ್ದರಿಂದ ಅಮೆರಿಕ ವಿಶ್ವಸಂಸ್ಥೆ ನಿಯಮಾವಳಿಯನ್ನು ಉಲ್ಲಂಘಿಸುತ್ತಿದೆ ಎಂದು ಆಪಾದಿಸಿದ್ದಾಗಿ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದರು. ಮೆಕ್ರಿಕೊ ಅಧ್ಯಕ್ಷೆ ಕ್ಲಾಡಿಯೊ ಶೀನ್ಬಮ್ ಗೆ ದೇಶವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ; ಏಕೆಂದರೆ ಡ್ರಗ್ ಮಾಫಿಯಾ ಅಲ್ಲಿ ಪ್ರಬಲವಾಗಿದೆ ಎಂದು ಟ್ರಂಪ್ ಹೇಳಿದರು.







