ಅಮೆರಿಕ | ಕಪ್ಪು ವರ್ಣೀಯ ಹಕೀಮ್ ಜಫ್ರೀಸ್ಗೆ ಸ್ಪೀಕರ್ ಹುದ್ದೆಯ ನಿರೀಕ್ಷೆ

ಅಕೀಮ್ ಜಫ್ರೀಸ್ | Photo Credit : AP
ವಾಶಿಂಗ್ಟನ್: ಅಮೆರಿಕದ ಜನಪ್ರತಿನಿಧಿ ಸಭೆಯ(ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಮೊದಲ ಕಪ್ಪು ವರ್ಣೀಯ ಸ್ಪೀಕರ್ ಆಗಲು ಡೆಮಾಕ್ರಟ್ ನಾಯಕ ಹಕೀಮ್ ಜಫ್ರೀಸ್ ಸಜ್ಜಾಗಿದ್ದಾರೆ. ಇದು ಜನವರಿ 2027 ರಲ್ಲಿ ಹೊಸ ಸಂಸತ್ತು ಸಭೆ ಸೇರಿದಾಗ ಸಂಸತ್ತಿನ ನಾಯಕತ್ವದಲ್ಲಿ ಒಂದು ಐತಿಹಾಸಿಕ ಬದಲಾವಣೆಗೆ ಹಾದಿ ಮಾಡಿಕೊಡಲಿದೆ.
56 ವರ್ಷದ ಹಕೀಮ್ ಜಫ್ರೀಸ್ ಅವರು ಮಾಜಿ ವಕೀಲರಾಗಿದ್ದು ಪ್ರಸ್ತುತ ಜನಪ್ರತಿನಿಧಿ ಸಭೆಯ ಡೆಮೋಕ್ರಟಿಕ್ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ರಿಪಬ್ಲಿಕನ್ ಪಕ್ಷದ ಮೈಕ್ ಜಾನ್ಸನ್ ಅವರ ಸ್ಥಾನದಲ್ಲಿ ಸ್ಪೀಕರ್ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸುವ ನಿರೀಕ್ಷೆಯಿದೆ.
Next Story




